ತಮ್ಮದೇ ಹಿಟ್ ಸಿನಿಮಾದ ಭಾಗ 2 ಮಾಡುತ್ತಿದ್ದಾರೆ ಶಿವರಾಜ್ ಕುಮಾರ್: ಡೀಟೈಲ್ಸ್ ಇಲ್ಲಿದೆ

ಶುಕ್ರವಾರ, 17 ಮೇ 2019 (08:18 IST)
ಬೆಂಗಳೂರು: ಸೀತಾರಾಮ ಕಲ್ಯಾಣ ಸಿನಿಮಾ ನಂತರ ನಿರ್ದೇಶಕ ಹರ್ಷ ಮುಂದಿನ ಚಿತ್ರ ಯಾವುದು ಎನ್ನುವುದಕ್ಕೆ ಉತ್ತರ ಸಿಕ್ಕಿದೆ. ಶಿವರಾಜ್ ಕುಮಾರ್ ಜತೆಗೂಡಿ ಹರ್ಷ ಹೊಸ ಸಿನಿಮಾ ಮಾಡುತ್ತಿರುವ ಸುದ್ದಿ ಬಂದಿದೆ.


ಶಿವಣ್ಣ ಜತೆಗೆ ಹರ್ಷ ಈ ಮೊದಲು ಭಜರಂಗಿ ಎನ್ನುವ ಹಿಟ್ ಸಿನಿಮಾ ಕೊಟ್ಟಿದ್ದರು. ಈಗ ಮತ್ತೆ ಅದೇ ಹೆಸರಿನಲ್ಲಿ ಪಾರ್ಟ್ 2 ಸಿನಿಮಾ ಮಾಡಲು ಈ ಜೋಡಿ ಮುಂದಾಗಿದೆ. ಭಜರಂಗಿ 2 ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ ಎಂಬ ಸುದ್ದಿ ಬಂದಿದೆ.

ಈ ಮೊದಲು ಮೈ ನೇಮ್ ಈಸ್ ಅಂಜಿ ಎನ್ನುವ ಸಿನಿಮಾ ಮಾಡಲು ಹರ್ಷ ಉದ್ದೇಶಿಸಿದ್ದರು. ಆದರೆ ಇದೀಗ ಟೈಟಲ್ ಬದಲಾಗಿದ್ದು, ಭಜರಂಗಿ 2 ಮಾಡಲಿದ್ದಾರೆ. ಆದರೆ ಹಿಂದಿನ ಭಜರಂಗಿ ಸಿನಿಮಾಕ್ಕೂ ಈ ಸಿನಿಮಾ ಕತೆಗೂ ಯಾವುದೇ ಸಂಬಂಧವಿಲ್ಲ ಎಂದು ಹರ್ಷ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ