ಪುನೀತ್-ದಿನಕರ್ ತೂಗುದೀಪ ಸಿನಿಮಾಗೆ ನಡೆದಿದೆ ಭರ್ಜರಿ ತಯಾರಿ

ಶುಕ್ರವಾರ, 6 ಆಗಸ್ಟ್ 2021 (12:20 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ದಿನಕರ್ ತೂಗುದೀಪ ಕಾಂಬಿನೇಷನ್ ನಲ್ಲಿ ಸಿನಿಮಾವೊಂದು ಬರುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.


ಈ ಸಿನಿಮಾಗೆ ಭರ್ಜರಿ ತಯಾರಿ ನಡೆದಿದೆ ಎನ್ನಲಾಗಿದೆ. ಈ ಸಿನಿಮಾ ಪಕ್ಕಾ ಆಕ್ಷನ್ ಥ್ರಿಲ್ಲರ್ ಆಗಿರಲಿದ್ದು, ಇದಕ್ಕಾಗಿ ದಿನಕರ್ ಭರ್ಜರಿ ತಯಾರಿಯನ್ನೇ ಮಾಡಿದ್ದಾರಂತೆ.

ಇದರಲ್ಲಿ ಪುನೀತ್ ಹಿಂದೆಂದೂ ಕಾಣಿಸಿಕೊಳ್ಳದಂತಹ ಆಕ್ಷನ್ ಸೀಕ್ವೆನ್ಸ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಚಿತ್ರದ ಬಜೆಟ್ ಕೂಡಾ ದೊಡ್ಡದು ಎನ್ನುತ್ತಿವೆ ಮೂಲಗಳು. ಇನ್ನು, ಜೇಮ್ಸ್ ಬಳಿಕ ಪುನೀತ್ ಈ ಸಿನಿಮಾದಲ್ಲಿ ತೊಡಗಿಸಿಕೊಳ್ಳಲಿದ್ದು, ಈ ವರ್ಷವೇ ಚಿತ್ರೀಕರಣ ಆರಂಭವಾಗಿ ಮುಂದಿನ ವರ್ಷ ತೆರೆ ಕಾಣುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ