ಸಿನಿಮಾ ನಿರ್ಮಾಣಕ್ಕಿಳಿದ ನಟ ಡಾಲಿ ಧನಂಜಯ್

ಬುಧವಾರ, 4 ಆಗಸ್ಟ್ 2021 (10:41 IST)
ಬೆಂಗಳೂರು: ಪ್ರತಿಭಾವಂತ ನಟ ಡಾಲಿ ಧನಂಜಯ್ ಈಗ ತಮ್ಮದೇ ನಿರ್ಮಾಣ ಸಂಸ್ಥೆ ಮೂಲಕ ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ.


ಬಡವ ರಾಸ್ಕಲ್ ಸಿನಿಮಾ ಮುಗಿಸಿರುವ ಧನಂಜಯ್ ಹೆಡ್ ಬುಷ್ ಎನ್ನುವ ಸಿನಿಮಾ ಮಾಡಲಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಲಿದ್ದು, ಧನಂಜಯ್ ಈ ಚಿತ್ರದ ಮೂಲಕ ನಿರ್ಮಾಣಕ್ಕಿಳಿದಿದ್ದಾರೆ.

ಭೂಗತ ಲೋಕದ ಡಾನ್‍ ಜಯರಾಜ್ ಪಾತ್ರವನ್ನು ಧನಂಜಯ್ ಮಾಡಲಿದ್ದಾರೆ. ಆಗಸ್ಟ್ 9 ರಿಂದ ಚಿತ್ರೀಕರಣ ಆರಂಭವಾಗಲಿದೆ. ‍ಧನಂಜಯ್ ಹುಟ್ಟುಹಬ್ಬದ ದಿನವಾದ ಆಗಸ್ಟ್ 23 ಕ್ಕೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ