ಕಾಂತಾರ, ರಾಘವೇಂದ್ರ ಸ್ಟೋರ್ಸ್ ಟೀಸರ್ ಗೆ ಜನ ಫಿದಾ

ಗುರುವಾರ, 14 ಏಪ್ರಿಲ್ 2022 (09:14 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾ ಬಿಡುಗಡೆ ಬೆನ್ನಲ್ಲೇ ಹೊಂಬಾಳೆ ಫಿಲಂಸ್ ತನ್ನದೇ ನಿರ್ಮಾಣದ ಮತ್ತೆರಡು ಸಿನಿಮಾಗಳ ಟೀಸರ್ ಹೊರಬಿಟ್ಟಿದೆ. ಈ ಎರಡೂ ಟೀಸರ್ ಗಳು ಜನರಿಗೆ ಭಾರೀ ಇಷ್ಟವಾಗಿದೆ.

ರಿಷಬ್ ಶೆಟ್ಟಿ ನಿರ್ದೇಶಿಸಿ, ನಾಯಕರಾಗಿ ನಟಿಸಿರುವ ಅಪ್ಪಟ ಕರಾವಳಿ ಶೈಲಿಯ ಗ್ರಾಮೀಣ ಸೊಗಡಿನ ಸಿನಿಮಾ ‘ಕಾಂತಾರ’ ರಿಷಬ್ ಆಂಡ್ ಟೀಂ ಮಂಗಳೂರು ಭಾಷೆ ಬಳಸಿ ಸಿನಿಮಾ ಮಾಡಿದಾಗಲೆಲ್ಲಾ ಅದ್ಭುತವಾಗಿಯೇ ಇರುತ್ತದೆ. ಇಲ್ಲೂ ಅದೇ ಶೈಲಿಯನ್ನು ಕಾಣಬಹುದು. ಹೀಗಾಗಿ ಜನಕ್ಕೆ ಈ ಟೀಸರ್ ಇಷ್ಟವಾಗಿದೆ.

ಇನ್ನೊಂದು ನವರಸನಾಯಕ ಜಗ್ಗೇಶ್ ನಾಯಕರಾಗಿರುವ ಸಂತೋಷ್ ಆನಂದ್ ರಾಮ್ ನಿರ್ದೇಶನದ ರಾಘವೇಂದ್ರ ಸ್ಟೋರ್ಸ್ ಸಿನಿಮಾ. ಪಕ್ಕಾ ಜಗ್ಗೇಶ್ ಶೈಲಿಯ ಹಾಸ್ಯ ಭರಿತ ಟೀಸರ್ ಕೂಡಾ ಜನರನ್ನು ಮುಟ್ಟಿದೆ. ಇವೆರಡೂ ಟೀಸರ್ ಗಳೂ ಕೆಜಿಎಫ್ 2 ಸಿನಿಮಾ ಪ್ರದರ್ಶನದ ನಡುವೆ ಥಿಯೇಟರ್ ನಲ್ಲಿ ಪ್ರಸಾರವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ