ನಟ ರಾಮ್‌ ಚರಣ್‌ಗೆ ಗೌರವ ಡಾಕ್ಟರೇಟ್ ಘೋಷಣೆ: ನಾಳೆ ಪ್ರದಾನ

Sampriya

ಶುಕ್ರವಾರ, 12 ಏಪ್ರಿಲ್ 2024 (15:53 IST)
Photo Courtesy Facebook
ಆಂಧ್ರಪ್ರದೇಶ:  ನಟ ರಾಮ್ ಚರಣ್ ಅವರು ಅವರು ಚಿತ್ರರಂಗಕ್ಕೆ ಹಾಗೂ ಉದ್ಯಮಕ್ಕೆ ನೀಡಿದ ಕೊಡುಗೆಗಾಗಿ ಚೆನ್ನೈನ ವೆಲ್ಸ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಕಟಿಸಿದೆ.  

ನಾಳೆ ರಾಮ್‌ಚರಣ್ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ್ದಾರೆ. ಈ ಹಿಂದೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ನಿರ್ದೇಶಕ ಶಂಕರ್ ಈ ಮನ್ನಣೆಯನ್ನು ಪಡೆದಿದ್ದಾರೆ.

2007ರಲ್ಲಿ ಚಿರುತಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಮ್ ಅವರಿಗೆ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಈಗಾಗಲೇ ಅಭಿನಯಕ್ಕೆ ನಂದಿ ಪ್ರಶಸ್ತಿಗಳು, ಫಿಲ್ಮ್‌ಫೇರ್‌ಗಳು, ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಲಭಿಸಿದೆ. ಅವರು ಆರ್‌ಆರ್‌ಆರ್‌ ಸಿನಿಮಾಗಾಗಿ ಅತ್ಯುತ್ತಮ ನಟ ವಿಭಾಗದಲ್ಲಿ ವಿಮರ್ಶಕರ ಆಯ್ಕೆ ಪ್ರಶಸ್ತಿಗಳಿಗೆ ನಾಮ ನಿರ್ದೇಶನಗೊಂಡರು.

ವೆಲ್ಸ್ ವಿಶ್ವವಿದ್ಯಾನಿಲಯವು ವಿವಿಧ ಕ್ಷೇತ್ರಗಳಲ್ಲಿನ ವಿಶಿಷ್ಟ ವ್ಯಕ್ತಿಗಳನ್ನು ಗುರುತಿಸಲು ಹೆಸರು ವಾಸಿಯಾಗಿದೆ. ರಾಮ್ ಚರಣ್ ಅವರು ಮನರಂಜನಾ ಉದ್ಯಮ ಮತ್ತು ಉದ್ಯಮಶೀಲತೆಗೆ ನೀಡಿದ ಕೊಡುಗೆಗಾಗಿ ಈ ಗೌರವವನ್ನು ನೀಡಲಾಗಿದೆ.

ರಾಮ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಗೆ ಈ ಗೌರವನ್ನು ನೀಡಿದ್ದಕ್ಕೆ ಶುಭ ಕೋರಿದ್ದಾರೆ. ಕೆಲವು ಅಭಿಮಾನಿಗಳು ಅವರನ್ನು ಈಗಾಗಲೇ 'ಡಾ ರಾಮ್ ಚರಣ್' ಎಂದು ಕರೆಯುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ