ತೆಲುಗಿನಲ್ಲಿ ಬಿಡುಗಡೆಯಾಗ್ತಿದೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ

ಶನಿವಾರ, 12 ಆಗಸ್ಟ್ 2023 (17:33 IST)
ಹೈದರಾಬಾದ್: ಕನ್ನಡದಲ್ಲಿ ಯಶಸ್ವಿಯಾಗಿದ್ದ ಹೊಸಬರ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಇದೀಗ ತೆಲುಗಿನಲ್ಲಿ ಡಬ್ ಆಗಿ ತೆರೆ ಕಾಣಲಿದೆ.

ತೆಲುಗಿನಲ್ಲಿ ಬಾಯ್ಸ್ ಹಾಸ್ಟೆಲ್ ಎಂಬ ಟೈಟಲ್ ನೊಂದಿಗೆ ಸಿನಿಮಾ ಬಿಡುಗಡೆಯಾಗಲಿದೆ. ಆಗಸ್ಟ್ 26 ರಿಂದ ಆಂಧ‍್ರ ಮತ್ತು ತೆಲಂಗಾಣ ಥಿಯೇಟರ್ ಗಳಲ್ಲಿ ತೆಲುಗಿನಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

ಬಹುತೇಕ ಹೊಸಬರೇ ನಟಿಸಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಕನ್ನಡದಲ್ಲಿ ಯಶಸ್ವಿಯಾಗಿತ್ತು. ಬಾಕ್ಸ್ ಆಫೀಸ್ ನಲ್ಲಿ ಭಾರೀ ಗಳಿಕೆಯೂ ಮಾಡಿತ್ತು. ಹೀಗಾಗಿ ಈಗ ತೆಲುಗಿನಲ್ಲಿ ಚಾಯ್ ಬಿಸ್ಕಟ್ ಫಿಲಂಸ್ ಮತ್ತು ಅನುಪಮಾ ಸ್ಟುಡಿಯೋಸ್ ಡಬ್ಬಿಂಗ್ ಹಕ್ಕು ಪಡೆದು ರಿಲೀಸ್ ಮಾಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ