Bank Janardhan: ನಟ ಜನಾರ್ಧನ್ ಮುಂದೆ ಬ್ಯಾಂಕ್ ಎಂದು ಬಂದಿದ್ದು ಹೇಗೆ
90 ರ ದಶಕದ ಬಹುತೇಕ ಸಿನಿಮಾಗಳಲ್ಲಿ ಪೋಷಕ, ಹಾಸ್ಯ ನಟನಾಗಿ ಮಿಂಚಿದ್ದ ಜನಾರ್ಧನ್ ತಮ್ಮ ಹೆಸರಿನ ಮುಂದೆ ಬ್ಯಾಂಕ್ ಎಂದು ಸೇರಿಸಿಕೊಳ್ಳಲೂ ಕಾರಣವಿದೆ. ಇದಕ್ಕೆ ಅವರು ಈ ಮೊದಲು ಮಾಡುತ್ತಿದ್ದ ವೃತ್ತಿಯೇ ಕಾರಣ.
ಸಿನಿಮಾ ರಂಗಕ್ಕೆ ಬರುವ ಮೊದಲು ಜನಾರ್ಧನ್ ಬ್ಯಾಂಕ್ ವೃತ್ತಿಯಲ್ಲಿದ್ದರು. ಆದರೆ ಬಣ್ಣದ ಲೋಕದ ಕಡೆಗೆ ಅವರ ಸೆಳೆತವಿದ್ದೇ ಇತ್ತು. ಪಿತಾಮಹ ಸಿನಿಮಾ ಮೂಲಕ 1985 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಅವರಿಗೆ ನಿಯಮಿತವಾಗಿ ಅವಕಾಶಗಳು ಸಿಗುತ್ತಾ ಹೋಯಿತು.
ಬ್ಯಾಂಕ್ ನಲ್ಲಿ ಹೇಳಿಕೊಳ್ಳುವಷ್ಟು ಸಂಬಳವಿರಲಿಲ್ಲ. ಅದರೆ ಬಣ್ಣದ ಲೋಕದಲ್ಲಿ ಸಿಗುತ್ತಿದ್ದ ಸಂಭಾವನೆ ಜೀವನ ನಿರ್ವಹಣೆಗೆ ತೊಂದರೆ ಮಾಡಲಿಲ್ಲ. ಹೀಗಾಗಿ ಅವರು ಬಣ್ಣದ ಲೋಕವನ್ನೇ ವೃತ್ತಿ ಬದುಕಾಗಿ ಆರಿಸಿಕೊಂಡರು. ಆದರೆ ತಾವು ಹಿಂದೆ ಕೆಲಸ ಮಾಡುತ್ತಿದ್ದ ಬ್ಯಾಂಕ್ ವೃತ್ತಿಯನ್ನು ತಮ್ಮ ಹೆಸರಿನ ಮುಂದೆ ಸೇರಿಸಿಕೊಂಡರು.