Bank Janardhan: ನಮಗೆ ಯಾರೂ ಅವಕಾಶ ಕೊಡ್ತಿಲ್ಲ ಎಂದು ಬೇಸರಿಸಿದ್ದ ಬ್ಯಾಂಕ್ ಜನಾರ್ಧನ್
90 ರ ದಶಕದ ಬಹುತೇಕ ಸಿನಿಮಾಗಳಲ್ಲಿ ಹೀರೋ ಸ್ನೇಹಿತ, ಹೀರೋಯಿನ್ ತಂದೆ, ಪಕ್ಕದ ಮನೆಯ ವ್ಯಕ್ತಿ ಹೀಗೆ ಹಲವು ಪಾತ್ರಗಳ ಮೂಲಕ ಬ್ಯಾಂಕ್ ಜನಾರ್ಧನ್ ಜನರನ್ನು ರಂಜಿಸಿದ್ದಾರೆ. ಅದರಲ್ಲೂ ನವರಸನಾಯಕ ಜಗ್ಗೇಶ್ ಅವರ ಬಹುತೇಕ ಸಿನಿಮಾಗಳಲ್ಲಿ ಜನಾರ್ಧನ್ ಇದ್ದೇ ಇದ್ದರು.
ಆದರೆ ಹೊಸಬರ ಹವಾ ಬಂದ ಮೇಲೆ ಕನ್ನಡ ಚಿತ್ರರಂಗದಲ್ಲಿ ಹಳೆಯ ಹಾಸ್ಯ ನಟರು ಸಂಪೂರ್ಣ ಮೂಲೆಗುಂಪಾದರು. ಈ ಬಗ್ಗೆ ಅವರಿಗೆ ಬೇಸರವಿತ್ತು. ಸಂದರ್ಶನವೊಂದರಲ್ಲಿ ನಮ್ಮನ್ನು ಈಗ ಯಾರೂ ಕರೆಯಲ್ಲ ಎಂದು ಬೇಸರಿಸಿಕೊಂಡಿದ್ದರು.
ಬಹುತೇಕ ಅದೇ ಕಾಲಘಟ್ಟದ ಪೋಷಕ ನಟರ ಕತೆ ಇದೇ ಆಗಿತ್ತು. ಈಗಿನ ಸಿನಿಮಾಗಳಲ್ಲಿ ಅವಕಾಶಗಳು ಸಿಗುತ್ತಿಲ್ಲ ಎನ್ನುವ ಬೇಸರ ಬಹುತೇಕ ನಟರಲ್ಲಿದೆ. ಬ್ಯಾಂಕ್ ಜನಾರ್ಧನ್ ಕೂಡಾ ಅದೇ ಬೇಸರ ಹೊಂದಿದ್ದರು. ಆದರೆ ಎಲ್ಲೂ ಯಾರ ಮೇಲೂ ಅಪವಾದ ಹೊರಿಸಿ, ವಿವಾದ ಮಾಡಿಕೊಂಡವರಲ್ಲ ಎಂಬುದು ವಿಶೇಷ.