ಸದ್ಯದಲ್ಲೇ ಎಲ್ಲವೂ ಗೊತ್ತಾಗುತ್ತೆ ಅಂತಿದ್ದಾರೆ ನಟ ಹೃತಿಕ್ ರೋಷನ್

ಮಂಗಳವಾರ, 28 ಜೂನ್ 2016 (09:40 IST)
ನಟಿ ಕಂಗನಾ ರನೌತ್ ಹಾಗೂ ಹೃತಿಕ್ ರೋಷನ್ ನಡುವಿನ ಜಗಳ ತಿಂಗಳ ಹಿಂದೆ ಎಲ್ಲೆಡೆ ಭಾರೀ ಸುದ್ದಿಯಾಗಿದ್ದು ಎಲ್ಲರಿಗೂ ಗೊತ್ತೆ ಇದೆ. ಕಂಗನಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನಾ ರೀತಿಯ ಹೇಳಿಕೆಗಳನ್ನು ನೀಡಿದ್ರು.ಆದ್ರೆ ಹೃತಿಕ್ ರೋಷನ್ ಮಾತ್ರ ಈ ಬಗ್ಗೆ ಯಾವುದೇ ಹೇಳಿಕೆ ನೀಡಿರಲಿಲ್ಲ. ಆದ್ರೀಗ ತುಂಬಾ ದಿನಗಳ ನಂತರ ಹೃತಿಕ್ ಮೌನ ಮುರಿದಿದ್ದಾರೆ.

ಐಫಾ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆ ಉತ್ತರಿಸುತ್ತಾ ಮಾತನಾಡಿದ ನಟ ಹೃತಿಕ್ ರೋಷನ್ ಅವರು ಇದು ನನ್ನ ಬೆನ್ನ ಹಿಂದೆ ನಡೆಯುತ್ತಿರುವ ಪ್ರಕರಣವಲ್ಲ.ಎಲ್ಲವೂ ನನ್ನ ಕಣ್ಣ ಮುಂದೆ ನಡೆದಿರೋದು. ಅಲ್ಲದೇ ಇದರಲ್ಲಿ ಯಾವುದು ನಿಜ ಯಾವುದು ಸುಳ್ಳು ಅನ್ನೋದು ಅತೀ ಶೀಘ್ರದಲ್ಲಿ ಎಲ್ಲರ ಕಣ್ಣ ಮುಂದೆ ಬರಲಿದ ಅಂತಾ ಅವರು ಹೇಳಿದ್ದಾರೆ. ಆ ಮೂಲಕ ವಿವಾದಕ್ಕೆ ಸಂಬಂಧಿಸಿದಂತೆ ಬಹು ದಿನಗಳಿಂದ ಮೌನವಾಗಿದ್ದ ಹೃತಿಕ್ ರೋಷನ್ ಅವರು ಇದೀಗ ಬಾಯ್ಬಿಟ್ಟಿದ್ದಾರೆ.ಆದ್ರೆ ಹೃತಿಕ್ ರೋಷನ್ ಅವರು ಹೇಳಿದಂತೆ ಎಲ್ಲವೂ ಗೊತ್ತಾಗುತ್ತೆ ಅನ್ನೋದು ಏನು ಅನ್ನೋದು ಮಾತ್ರ ಇನ್ನು ಅಭಿಮಾನಿಗಳಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ.
 
ಇನ್ನು ಐಫಾ ಅವಾರ್ಡ್ಸ್ ಫಂಕ್ಷನ್ ನಲ್ಲಿ ಹೃತಿಕ್ ರೋಷನ್ ಅವರು ಡ್ಯಾನ್ಸ್ ಮಾಡಿದ್ರು.ಆದ್ರೆ ಡ್ಯಾನ್ಸ್ ಮಾಡೋ ಮೊದಲು ಹೃತಿಕ್ ಅವರು ತುಂಬಾನೇ ನರ್ವಸ್ ಆಗಿದ್ರಂತೆ.ಅದಕ್ಕೆ ಕಾರಣ ಆ ಪರ್ಫಾಮೆನ್ಸ್ ನ್ನು ಅವರ ಮಕ್ಕಳು ನೋಡುತ್ತಾರೆ ಅನ್ನೋದು. ಅವರು ಅದಕ್ಕೆ ಯಾವ ರೀತಿ ಪ್ರತಿಕ್ರಿಯೆ ಕೊಡುತ್ತಾರೆ ಅಂತಾ ಹೃತಿಕ್ ಕಾಯುತ್ತಿದ್ದರಂತೆ. ನಾನು ಯಾರ ಮುಂದೆ ಪರ್ಫಾಮೆನ್ಸ್ ಮಾಡೋದಕ್ಕೆ ಹಿಂದೇಟು ಹಾಕೋದಿಲ್ಲ.ಆದ್ರೆ ಮಕ್ಕಳ ಮುಂದೆ ಮಾಡೋವಾಗ ತುಂಬಾನೇ ನರ್ವಸ್ ಆಗಿದ್ದೆ ಅಂತಾ ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ