ಡಿಕ್ಟೇಟರ್ ಸಿನಿಮಾದಿಂದ ಹೊರ ನಡೆದ ಹುಚ್ಚ ವೆಂಕಟ್

ಸೋಮವಾರ, 2 ಮೇ 2016 (17:30 IST)
ಹುಚ್ಚವೆಂಕಟ್ ಅವರು ಡಿಕ್ಟೇಟರ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆ ಅಂತಾ ಹೇಳಿಕೊಂಡಿದ್ರು. ಅಭಿಮಾನಿಗಳು ಕೂಡ ನಮ್ಮ ಅವರ ಸಿನಿಮಾವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಲಬಹುದು ಅಂತಾ ಫುಲ್ ಖುಷಿಯಾಗಿದ್ರು.ಆದ್ರೆ ಇದೀಗ ಅಭಿಮಾನಿಗಳಿಗೆ ಹುಚ್ಚ ವೆಂಕಟ್ ಭರ್ಜರಿ ಶಾಕ್ ನೀಡಿದ್ದಾರೆ.

ಇದೀಗ ನಾನು  ಹೊರ ಬಂದಿರೋದಾಗಿ ಹುಚ್ಚ ವೆಂಕಟ್ ಅವರು ಹೇಳಿದ್ದಾರೆ. ಚಿತ್ರತಂಡ ನನ್ನ  ಕಾಲ್‌ಶೀಟ್ ಪಡೆದು ನನ್ನ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿದೆ. ಹೀಗಾಗಿ ನಾನು ಚಿತ್ರದಿಂದ ಹೊರಬಂದಿರುವುದಾಗಿ ವೆಂಕಟ್ ಹೇಳಿದ್ದಾರೆ. ಇನ್ನು ನಾನು ಯಾರಿಗೂ ತಗ್ಗಿ-ಬಗ್ಗಿ ನಡೆಯೋದಿಲ್ಲ. 'ಡಿಕ್ಟೇಟರ್' ಚಿತ್ರದಲ್ಲಿ ನಾನು ಅಭಿನಯಿಸುತ್ತೇನೆ ಅಂತಾ ಅಭಿಮಾನಿಗಳು ಖುಷಿಯಾಗಿದ್ರು.ಆದ್ರೆ ಆ ಚಿತ್ರ ಎಸ್.ನಾರಾಯಣ್ ನಿರ್ದೇಶನ ಇದೆ ಅಂತ ಹೆಸರು ಮಾಡಿದ್ದಲ್ಲ, ನಾನು ಅಭಿನಯಿಸ್ತಿದ್ದೀನಿ ಅಂತ ಅಭಿಮಾನಿಗಳು ಮೆಚ್ಚಿಕೊಂಡಿದ್ರು. ಇನ್ಮೇಲೆ ನಾನು ನನ್ನಿಷ್ಟದಂತೆ ನನ್ನ ಬ್ಯಾನರಿನಲ್ಲೇ ಅಭಿನಯಿಸ್ತೀನಿ ಅಂದ್ದಾರೆ.
 
ಇನ್ನು ಹುಚ್ಚವೆಂಕಟ್ ಅವರು ನಾನು ಶಿವರಾಜ್ ಕುಮಾರ್ ಅವರ ಅಭಿಮಾನಿ ಅಂತಾ ಹೇಳಿದ್ದಾರೆ. ಕನ್ನಡದಲ್ಲಿ ಡಾ. ವಿಷ್ಣುವರ್ದನ್ ಅವರನ್ನು ಬಿಟ್ರೆ ನಾನು ತುಂಬಾ ಇಷ್ಟಪಡುವ ನಟ ಅಂದ್ರೆ ಅದು ಶಿವರಾಜ್ ಕುಮಾರ್ ಅಂತಾ ಅವರು ಹೇಳಿದ್ದಾರೆ.ಸದ್ಯ ಹುಚ್ಚ ವೆಂಕಟ್ ಡಿಕ್ಟೇಟರ್ ಸಿನಿಮಾದಿಂದ ಹೊರ ನಡೆದಿರೋದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
 

ವೆಬ್ದುನಿಯಾವನ್ನು ಓದಿ