ಸರ್ಕಾರದ ವಿರುದ್ಧ ನಟ ಹುಚ್ಚ ವೆಂಕಟ್ ಕೋಪಗೊಂಡಿದ್ಯಾಕೆ?

ಮಂಗಳವಾರ, 17 ಜುಲೈ 2018 (14:36 IST)
ಬೆಂಗಳೂರು : ಇತ್ತೀಚೆಗಷ್ಟೆ ಸುಬ್ರಮಣಿ ಎಂಬ ಪೌರ ಕಾರ್ಮಿಕ ವೇತನ ನೀಡದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಇದೀಗ ಸ್ಯಾಂಡಲ್ ವುಡ್ ನಟ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ಹುಚ್ಚಾ ವೆಂಕಟ್ ಅವರು ಹೊಸ ವಿಡಿಯೋವೊಂದನ್ನು  ಫೇಸ್ ಬುಕ್ ನಲ್ಲಿ ಅಪ್ಲೋಟ್ ಮಾಡಿ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಮೇಲೆ ಹರಿಹಾಯ್ದಿದ್ದಾರೆ. ತಕ್ಷಣವೇ ಪೌರಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ನೇಮಿಸಿಕೊಂಡು, ಅವರಿಗೆ ಸಂಬಳ ನೀಡುವ ಕೆಲಸ ಮಾಡಿ ಎಂದು ಸಿಎಂ, ಡಿಸಿಎಂ ಗೆ 'ಆರ್ಡರ್' ಮಾಡಿದ್ದಾರೆ.


ಹಾಗೇ ‘ಒಬ್ಬ ಪೌರ ಕಾರ್ಮಿಕ ಸತ್ತರೆ ಹತ್ತು ಲಕ್ಷ ರೂ.ಪರಿಹಾರ ಅಂತೀರಾ. ಅದು ನನ್ನ ಎಕ್ಕಡಕ್ಕೆ ಸಮಾನ! ಬದುಕಿದ್ದಾಗ ಒಂದು ರುಪಾಯಿ ಕೊಟ್ರೂ ಅದಕ್ಕೆ ಬೆಲೆ ಇರುತ್ತೆ. ಸತ್ತ ಮೇಲೆ ಕೋಟಿ ಕೊಟ್ರೂ ಏನು ಪ್ರಯೋಜನ?’ ಎಂದು ಅವರ ಸ್ಟೈಲ್ ನಲ್ಲಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ