ನಿಮ್ಮ ಮೆದುಳನ್ನು ಚುರುಕುಗೊಳಿಸಲು ಸಿಂಪಲ್ ಆಗಿ ಹೀಗೆ ಮಾಡಿ ಸಾಕು

ಮಂಗಳವಾರ, 17 ಜುಲೈ 2018 (07:08 IST)
ಬೆಂಗಳೂರು : ವ್ಯಾಯಾಮ, ಯೋಗ, ಜಿಮ್ ಯಾವುದನ್ನೂ ಮಾಡಲು ಸಾಧ್ಯವಾಗದವರಿಗೆ ಬೆಸ್ಟ್ ಎಂದರೆ ವಾಕಿಂಗ್. ಇದಕ್ಕೆ ಯಾವುದೇ ಸಲಕರಣೆಗಳು, ಇಂತಹದ್ದೇ ಚಪ್ಪಲಿ, ಬೂಟು ಎಂದೇನು ಬೇಕಾಗಿಲ್ಲ. ರಸ್ತೆ ಅಥವಾ ಪಾರ್ಕು ಯಾವುದಾದರೂ ಸರಿ. ಬಿರಬಿರನೆ ಹೆಜ್ಜೆ ಹಾಕಿದರೆ ಸಾಕು.


ವಾಕಿಂಗ್‌ನಿಂದ ಹಲವಾರು ಪ್ರಯೋಜನಗಳಿವೆ ಎನ್ನುತ್ತಿದ್ದಾರೆ ವೈದ್ಯರು. ಹಾಗೇ ಮಿದುಳಿನ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಕೆಲಸವನ್ನು ಕೂಡ ಇದು ಮಾಡುತ್ತದೆಯಂತೆ.


ಹೌದು, ಇತ್ತೀಚಿನ ಸಂಶೋಧನೆಯೊಂದು ಇಂಥದ್ದೊಂದು ಅಂಶವನ್ನು ಬಹಿರಂಗ ಪಡಿಸಿದೆ.  ನಡೆದಾಡಿ, ಓಡಾಡಿ ಅಥವಾ ಟ್ರೆಕ್ಕಿಂಗ್‌ ಹೋಗಿ. ಒಟ್ಟಾರೆ ನಿಸರ್ಗದೊಂದಿಗೆ ನೀವು ಕಳೆಯುವ ಸಮಯವು ನಿಮ್ಮ ದೇಹಕ್ಕೆ ವ್ಯಾಯಾಮ ನೀಡಿ ಮನಸ್ಸಿಗೆ ಉಲ್ಲಾಸ ನೀಡುವುದಷ್ಟೆ ಅಲ್ಲ, ಮಿದುಳಿನ ಚಟುವಟಿಕೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಂಡು ಬರುತ್ತದೆ. ಕ್ರಿಯಾಶೀಲತೆ ಕಾಣಿಸುತ್ತದೆ. ಅಷ್ಟೆ ಅಲ್ಲ, ಮಾನಸಿಕ ಆರೋಗ್ಯ ಸಮಸ್ಯೆ ಇವರಲ್ಲಿ ಕಂಡು ಬರುವುದಿಲ್ಲವಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ