ದೇಶದ ಭೀಕರ ಸಮಸ್ಯೆಯೊಂದನ್ನು ತೋರಿಸಿಕೊಟ್ಟ ನಟ ಉಪೇಂದ್ರ

ಮಂಗಳವಾರ, 17 ಜುಲೈ 2018 (07:41 IST)
ಬೆಂಗಳೂರು : ಸಿನಿಮಾ ರಂಗದ ಜೊತೆಗೆ ರಾಜಕೀಯದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸ್ಯಾಂಡಲ್ ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಇದೀಗ ದೇಶದ ಸಮಸ್ಯೆವೊಂದರ ಹಿಂದಿರುವ ಸತ್ಯವನ್ನು ತೋರಿಸಿದ್ದಾರೆ.


ಹೌದು. ನಟ ಉಪೇಂದ್ರ ಅವರು ರಾಜಕೀಯಕ್ಕೆ ಕಾಲಿಟ್ಟ ನಂತರ ದೇಶದ ಸಮಸ್ಯೆಗಳಿಗೆ ತಮ್ಮದೇ ಆದ ರೀತಿಯಲ್ಲಿ ಕೆಲವು ಪರಿಹಾರಗಳನ್ನು  ಸೂಚಿಸಿದ್ದಾರೆ. ಹಾಗೇ  ಇದೀಗ ಅವರು  2017ರಲ್ಲಿ ನಮ್ಮ ದೇಶದಲ್ಲಿಯ ರಸ್ತೆಗಳಲ್ಲಿರುವ ಗುಂಡಿಗಳಿಗೆ ಬಲಿಯಾದವರ ಸಂಖ್ಯೆ ಎಷ್ಟು ಎಂಬುದರ  ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.


ಅವರು ಶೇರ್​ ಮಾಡಿರುವ ವರದಿಯ ಪ್ರಕಾರ ಕಳೆದ ವರ್ಷ ಬರೋಬ್ಬರಿ 3596 ಜನರು ರಸ್ತೆಯಲ್ಲಿರುವ ಗುಂಡಿಗಳಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಖ್ಯೆ ಉಗ್ರರ ಗುಂಡೇಟಿಗೆ ಬಲಿಯಾದವರ ( 2017 ರಲ್ಲಿ 803 ಸಾವು) ಸಂಖ್ಯೆಗಿಂತ ಹೆಚ್ಚಾಗಿದೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ 987 ಹಾಗೂ ಮಹಾರಾಷ್ಟ್ರದಲ್ಲಿ 726 ಜನ ರಸ್ತೆಯಲ್ಲಿಯ ಗುಂಡಿಗಳಿಗೆ ಬಲಿಯಾಗಿರುವುದಾಗಿ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ