24 ವರ್ಷದಲ್ಲಿ ಇದೆಲ್ಲಾ ಬೇಕಿತ್ತಾ ಅನಿಸ್ತು, ಜೈಲು ಅನುಭವದ ವಿಡಿಯೋ ಹಂಚಿಕೊಂಡ ಸೋನು ಗೌಡ
ʻʻಜೈಲಿಗೆ ಹೋದಾಗತುಂಬಾನೇ ಬೇಜಾರಾಯ್ತು. 24 ವರ್ಷಕ್ಕೆ ನನಗೆ ಇದೆಲ್ಲ ಬೇಕಿತ್ತಾ ಅನಿಸ್ತು. ಕೊಲೆ ಮಾಡಿ ಬಂದವರ ಜತೆ ನಾಲ್ಕು ಗೋಡೆಗಳ ಮಧ್ಯೆ ಇದ್ದು ಬಂದಿದ್ದೀನಿ ಎಂದು ಕೊಂಡಾಗ ಅದನ್ನು ಹೇಳಲಾಗುತ್ತಿಲ್ಲ. ಮೂರು ದಿನಕ್ಕೆ ಒಮ್ಮೆ ಫೋನ್ ಕೊಡುತ್ತಿದ್ದರು. ಕುಟುಂಬದವರಿಗೆ ಅಥವಾ ವಕೀಲರಿಗೆ ಫೋನ್ ಮಾಡಿ 3-4 ನಿಮಿಷ ಮಾತನಾಡಲು ಅವಕಾಶವಿತ್ತು. ಇದರಿಂದ ವ್ಯಕ್ತಿಯ ಬೆಲೆ ಎಷ್ಟು ಎನ್ನುವುದು ಗೊತ್ತಾಯಿತು' ಎಂದರು.
ʻʻಟ್ರೋಲ್ ಪೇಜ್‌ಗಳು ನನಗೆ ತುಂಬ ಸಪೋರ್ಟ್ ಮಾಡಿದವು. ಇದಾದ ಬಳಿಕ ಹೊರ ಬಂದ ಮೇಲೆ ಫೋನ್ ನೋಡಿಲ್ಲ. ನನ್ನದು ಸಣ್ಣ ಸರ್ಕಲ್. ನನ್ನ ಅಣ್ಣ ಎಲ್ಲರೂ ನನ್ನ ಜತೆ ನಿಂತರು. ನನ್ನ ಪ್ರಕರಣದ ಬಗ್ಗೆ ಹೆಚ್ಚಿನದ್ದನ್ನು ಹೇಳೋಕೆ ಆಗಲ್ಲ. ಈಗ ನಾನು ಆರಾಮದಾಯಕವಾಗಿ ಹೊರಗಡೆ ಓಡಾಡುತ್ತಿದ್ದೇನೆ. ರೀಲ್ಸ್ ಮಾಡುತ್ತೇನೆ. ನಿಮ್ಮ ಸಪೋರ್ಟ್ ನನಗೆ ಬೇಕು. ಜೈಲಿನಲ್ಲಿ ತುಂಬ ಸೊಳ್ಳೆ ಇರ್ತಿತ್ತು. ಅದು ಬಹಳ ಕಷ್ಟವಾಗಿತ್ತು. 24 ವಯಸ್ಸಿನಲ್ಲಿ ಇದೆಲ್ಲ ನೋಡಿ ಬಿಟ್ಟೆ ಎನ್ನುವ ಬೇಜಾರು ಅಷ್ಟೇ' ಎಂದಿದ್ದಾರೆ ಸೋನು ಶ್ರೀನಿವಾಸ್ ಗೌಡ.