ಸದ್ಯ ಮೈ ತೇರಾ ಹೀರೋ ಸಿನಿಮಾದ ಶೂಟಿಂಗ್ ಗಾಗಿ ಇಲಿಯಾನ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಬೆಂಗಳೂರು ವಾಸದ ಬಗ್ಗೆ ಮಾತನಾಡಿರುವ ಇಲಿಯಾನ ಸಿನಿಮಾದಿಂದ ಕೊಂಚ ಬಿಡುವು ಮಾಡಿಕೊಂಡು ನಾನು ಮಲ್ಲೇಶ್ವರಂನ ಮಾಲ್ ಗಳಲ್ಲಿ ಸುತ್ತಾಡಿದ್ದಾಗಿ ಹೇಳಿದ್ದಾರೆ. ಅಲ್ಲದೇ ನಾನು ಬೆಂಗಳೂರಿನ ಸ್ಟೈಲ್ ನ್ನು ಇಷ್ಟಪಡುತ್ತೇನೆ.ಇಲ್ಲಿನ ಜನ ತುಂಬಾನೇ ಫ್ಯಾಶನೇಬಲ್ ಆಗಿದ್ದಾರೆ. ನಗರದಲ್ಲಿ ತುಂಬಾನೇ ಸೆಕೆ ಇದ್ರೂ ಕೂಡ ನಾನು ತುಂಬಾನೇ ಎಂಜಾಯ್ ಮಾಡಿದೆ ಅಂತಾ ಅವರು ಹೇಳಿದ್ದಾರೆ.
ತಮ್ಮ ಮುಂದಿನ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರ ಜೊತೆ ಅಭಿನಯಿಸುತ್ತಿರೋದಾಗಿ ಹೇಳಿರುವ ಇಲಿಯಾನ, ಈ ಹಿಂದೆ ನಾನು ಕನ್ನಡದ ಹುಡುಗ ಹುಡುಗಿ ಸಿನಿಮಾದಲ್ಲಿ ಇಲ್ಲೇನಾ ಇಲ್ಲೇನಾ ಅನ್ನೋ ಹಾಡಿನಲ್ಲಿ ಅಭಿನಯಿಸಿದ್ದೆ. ಇದೀಗ ಮತ್ತೆ ಅವಕಾಶ ಸಿಕ್ಕಿದ್ರೆ ಮತ್ತೆ ಕನ್ನಡದಲ್ಲಿ ಅಭಿನಯಿಸುತ್ತೇನೆ ಅಂತಾ ಹೇಳಿದ್ದಾರೆ. ಅಲ್ಲದೇ ನನಗೆ ಯಾವುದೇ ಭಾಷಾ ತೊಡಕುಗಳು ಅಡ್ಡ ಬರಲ್ಲ ಅಂದಿದ್ದಾರೆ.