IND vs WI: ಸೀಟಿ ಹೊಡೆದು ಶತಕ ಸಂಭ್ರಮಿಸಿದ ಕೆಎಲ್ ರಾಹುಲ್

Krishnaveni K

ಶುಕ್ರವಾರ, 3 ಅಕ್ಟೋಬರ್ 2025 (11:29 IST)
Photo Credit: X
ಅಹಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು ಟೀಂ ಇಂಡಿಯಾ ಪರ ಶತಕ ಸಿಡಿಸಿದ ಕನ್ನಡಿಗ ಕೆಎಲ್ ರಾಹುಲ್ ಸೀಟಿ ಹೊಡೆದು ಶತಕ ಸಂಭ್ರಮಿಸಿದ್ದಾರೆ.

ಅಹಮದಾಬಾದ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಕೆಎಲ್ ರಾಹುಲ್ ಓಪನರ್ ಆಗಿ ಕಣಕ್ಕಿಳಿದು ಶತಕ ಸಿಡಿಸಿದ್ದಾರೆ. ಇದು ಅವರ ಟೆಸ್ಟ್ ವೃತ್ತಿ ಜೀವನದ 11 ನೇ ಶತಕ ಸಿಡಿಸಿದರು. ಆದರೆ ಭಾರತದಲ್ಲಿ ಇದು ಅವರ ಕೇವಲ ಎರಡನೇ ಟೆಸ್ಟ್ ಶತಕವಾಗಿದೆ.

ಇತ್ತೀಚೆಗಿನ ದಿನಗಳಲ್ಲಿ ಅದ್ಭುತ ಫಾರ್ಮ್ ನಲ್ಲಿರುವ ರಾಹುಲ್ ಇಂದು 190 ಎಸೆತ ಎದುರಿಸಿ ತಾಳ್ಮೆಯ ಶತಕ ಸಿಡಿಸಿದ್ದಾರೆ. ಈ ಇನಿಂಗ್ಸ್ ನಲ್ಲಿ ಆಕರ್ಷಕ ಹೊಡೆತಗಳು ಸೇರಿದ್ದವು. ಅದರಲ್ಲೂ 2016 ರ ಬಳಿಕ ತವರಿನಲ್ಲಿ ರಾಹುಲ್ ಸಿಡಿಸುತ್ತಿರುವ ಮೊದಲ ಶತಕ ಇದಾಗಿದೆ.

ಇದೇ ಕಾರಣಕ್ಕೂ ಅವರ ಸಂಭ್ರಮವೂ ಜೋರಾಗಿತ್ತು. ಬ್ಯಾಟ್ ಮೇಲೆತ್ತಿ ಸೀಟಿ ಹೊಡೆದು ಶತಕದ ಸಂಭ್ರಮಾಚರಣೆ ಮಾಡಿದ್ದಾರೆ. ಸಾಮಾನ್ಯವಾಗಿ ಕೂಲ್ ಆಗಿರುವ ರಾಹುಲ್ ಈ ರೀತಿ ಆಕ್ರಮನಕಾರಿಯಾಗಿ ಸಂಭ್ರಮಿಸಿದ್ದು ವಿಶೇಷವಾಗಿತ್ತು. ಇನ್ನು, ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ 3 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿದ್ದು 52 ರನ್ ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ