ಅದ್ಭುತ ಪ್ರದರ್ಶನ ನೀಡಿಯೂ ಕೆಎಲ್ ರಾಹುಲ್ ಗೆ ತಂಡದಲ್ಲಿ ಇಂಥಾ ಸ್ಥಾನವೇ

Krishnaveni K

ಮಂಗಳವಾರ, 24 ಜೂನ್ 2025 (10:56 IST)
Photo Credit: X
ಲೀಡ್ಸ್: ಟೀಂ ಇಂಡಿಯಾದಲ್ಲಿ ಹಿರಿಯ ಕ್ರಿಕೆಟಿಗರೆಲ್ಲಾ ನಿವೃತ್ತಿಯಾದ ಬಳಿಕ ಕೆಎಲ್ ರಾಹುಲ್ ಈಗ ತಂಡದ ಬ್ಯಾಟಿಂಗ್ ಜವಾಬ್ಧಾರಿ ಹೊತ್ತವರಂತೆ ಆಡುತ್ತಿದ್ದಾರೆ. ಅದ್ಭುತ ಪ್ರದರ್ಶನ ನೀಡಿದ ಹೊರತಾಗಿಯೂ ತಂಡದಲ್ಲಿ ಅವರ ಸ್ಥಾನ ಹೇಗೆ ಎಂಬುದನ್ನು ಅವರೇ ಹಂಚಿಕೊಂಡಿದ್ದಾರೆ.

ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ ನಲ್ಲಿ ಶತಕ ಗಳಿಸಿದ ಬಳಿಕ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಈ ವೇಳೆ ತಂಡದಲ್ಲಿ ತಮ್ಮ ಸ್ಥಾನವೇನು ಎಂಬುದನ್ನು ಹಂಚಿಕೊಂಡಿದ್ದಾರೆ. ಇದನ್ನು ಅವರು ಖುಷಿಯಿಂದ ಹೇಳಿದ್ದಾರೋ, ಬೇಸರದಿಂದಲೇ ಹೇಳಿದ್ದಾರೋ ಗೊತ್ತಿಲ್ಲ.

ಆದರೆ ಕಳೆದ ಎರಡು ವರ್ಷಗಳಿಂದ ತಂಡದಲ್ಲಿ ನನ್ನ ಬ್ಯಾಟಿಂಗ್ ಕ್ರಮಾಂಕವೇನು ಎಂದು ನನಗೇ ಗೊತ್ತಿಲ್ಲ ಎಂದಿದ್ದಾರೆ. ಬಹುಶಃ ಕೆಎಲ್ ರಾಹುಲ್ ನಷ್ಟು ವೈವಿಧ್ಯಮಯ ಆಟಗಾರನನ್ನು ಟೀಂ ಇಂಡಿಯಾ ಎಂದೂ ಕಂಡಿಲ್ಲ. ಬ್ಯಾಟಿಂಗ್ ಗೆ ಸೈ, ಕೀಪಿಂಗ್ ಗೂ ಸೈ ಎನ್ನುವ ಕನ್ನಡಿಗ ಕೊನೆಗೆ ಯಾವ ಕ್ರಮಾಂಕದಲ್ಲಿ ಆಡಿಸಿದರೂ ಮರು ಮಾತನಾಡದೇ ಬ್ಯಾಟಿಂಗ್ ಮಾಡುತ್ತಾರೆ. ಅವರಿಗೆ ಓಪನರ್ ಆಗಿಯೂ ಗೊತ್ತು ಕೊನೆಯ ಬ್ಯಾಟಿಗನಾಗಿಯೂ ಗೊತ್ತು. ಒಟ್ಟಿನಲ್ಲಿ ನನಗೆ ತಂಡದಲ್ಲಿ ಸ್ಥಾನ ಸಿಗಬೇಕು ಅಷ್ಟೇ ಎಂಬುದು ಅವರ ಪಾಲಿಸಿ. ಹಿರಿಯ ಆಟಗಾರನಾಗಿದ್ದರೂ ಅವರಿಗೆ ಇಂದಿಗೂ ತಂಡದಲ್ಲಿ ಸ್ಥಿರವಾದ ಬ್ಯಾಟಿಂಗ್ ಕ್ರಮಾಂಕವಿಲ್ಲ. ಕಳೆದ ಎರಡು ವರ್ಷಗಳಿಂದ ತಂಡದಲ್ಲಿ ಅವರನ್ನು ಬೇಕಾದ ಕ್ರಮಾಂಕದಲ್ಲಿ ಆಡಿಸಲಾಗುತ್ತಿದೆ. ಹೀಗಾಗಿಯೇ ಅವರು ಈ ರೀತಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ