ಇದು ಅನುಪಯುಕ್ತ, ಚಿಂತನೆಯಿಲ್ಲದ ಕೆಲಸ: ಹೋಮ ಹವನಕ್ಕೆ ಅಸಮಾಧಾನ ಹೊರಹಾಕಿದ ಚೇತನ್ ಅಹಿಂಸಾ

Sampriya

ಸೋಮವಾರ, 12 ಆಗಸ್ಟ್ 2024 (14:37 IST)
Photo Courtesy X
ಬೆಂಗಳೂರು: ಕನ್ನಡ ಚಿತ್ರರಂಗ ಪಾತಳಕ್ಕೆ ಕುಸಿಯುತ್ತಿರುವುದರಿಂದ, ಸಂಕಷ್ಟಗಳಿಂದ ಪಾರು ಆಗಲು ಕರ್ನಾಟಕ ಕಲಾವಿದರ ಸಂಘ ದೇವರ ಮೊರೆ ಹೋಗಿ ಇದೇ 14ರಂದು ಹೋಮ ಹವನಕ್ಕೆ ಮಾಡಲಿದೆ. ಈ ವಿಚಾರವನ್ನು ಸಿನಿಮಾ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಅವರು ಮಾಧ್ಯಮದ ಮುಂದೆ ಹೇಳಿಕೊಂಡರು.

ಕನ್ನಡ ಸಿನಿಮಾಗಳು ಅಂದು ಕೊಂಡ ಹಾಗೇ ಯಶಸ್ವಿ ಕಾಣುತ್ತಿಲ್ಲ. ಸಿನಿಮಾಗೆ ದುಡ್ಡು ಹಾಕುವ ನಿರ್ಮಾಪಕರು ಸಂಕಷ್ಟದಲ್ಲಿದ್ದು, ಎಲ್ಲ ಸಮಸ್ಯೆಗಳು ದೂರವಾಗಲೆಂದು ಈ ಹೋಮ ಹವನ ಹಮ್ಮಿಕೊಂಡಿದ್ದೇವೆ ಎಂದರು.

ಈ ಹೋಮದ ಬಗ್ಗೆ ನಟ ಚೇತನ್ ಅಹಿಂಸಾ ಅವರು ಅಸಮಾಧಾನ ಹೊರಹಾಕಿದ್ದಾರೆ. ಈ ವಾರ, ಕೆಎಫ್‌ಐನ ಕಲಾವಿದರ ಸಂಘವು ಚಿತ್ರರಂಗದ ಒಳಿತಿಗಾಗಿ ಪೂಜೆ (ಪೂಜೆ) ಆಯೋಜಿಸುತ್ತಿದೆ. ಇದು ಅನುಪಯುಕ್ತ ಮತ್ತು ಚಿಂತನೆಯಿಲ್ಲದ ಕೃತ್ಯ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕನ್ನಡ ಚಲನಚಿತ್ರರಂಗವನ್ನು ಉತ್ತಮಗೊಳಿಸಲು, ಬಲವಾದ ಬರಹಗಾರರ ಸಂಘವನ್ನು ಸ್ಥಾಪಿಸಬೇಕು, ಮೀಟೂ ಮತ್ತು ಸ್ಟಾರ್ ಸಂಸ್ಕೃತಿ ಎರಡನ್ನೂ ಕಿತ್ತುಹಾಕಬೇಕು. ಕಾರ್ಮಿಕರಿಗೆ ಪ್ರಯೋಜನಗಳನ್ನು ಒದಗಿಸಬೇಕು. ಮತ್ತು ಗುಣಮಟ್ಟದ, ವಿಷಯ-ಚಾಲಿತ ಚಲನಚಿತ್ರಗಳನ್ನು ತಯಾರಿಸಬೇಕು ಎಂದು ಆಗ್ರಹಿಸಿದರು.

ಇದೇ 14ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಕಟ್ಟಡದಲ್ಲಿ ಸುಬ್ರಮಣ್ಯ ಸರ್ಪ ಶಾಂತಿ ಹೋಮಗೆ ಸಿದ್ಧತೆ ನಡೆಸಲಾಗುತ್ತಿದೆ.  ಬೆಳಗ್ಗೆ 8 ಗಂಟೆಯಿಂದ ಪೂಜೆ ಆರಂಭವಾಗಲಿದ್ದು, ಗಣಪತಿ ಹೋಮ , ಮೃತ್ಯುಂಜಯ ಹೋಮ ಬಳಿಕ ಸರ್ಪ ಶಾಂತಿ ಹೋಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಪ್ರತಿಯೊಬ್ಬರಿಗೂ ಆಹ್ವಾನವಿದ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ