ಚಿರು ಈಸ್ ಬ್ಯಾಕ್: ಗಂಡು ಮಗುವಿಗೆ ಜನ್ಮ ನೀಡಿದ ಮೇಘನಾ ರಾಜ್

ಗುರುವಾರ, 22 ಅಕ್ಟೋಬರ್ 2020 (11:44 IST)
ಬೆಂಗಳೂರು: ನಟಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಚಿರಂಜೀವಿ ಸರ್ಜಾ ಪುನರಾಗಮನವಾಗುತ್ತದೆ ಎಂದು ನಂಬಿಕೊಂಡಿದ್ದ ಕುಟುಂಬಸ್ಥರು, ಅಭಿಮಾನಿಗಳ ಹಾರೈಕೆ ನಿಜವಾಗಿದೆ.


ನಗರದ ಖಾಸಗಿ ಆಸ್ಪತ್ರೆಗೆ ಮೊನ್ನೆಯೇ ದಾಖಲಾಗಿದ್ದು ಮೇಘನಾ ಇಂದು 11.07 ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಧ್ರುವ ಸರ್ಜಾ ಕೂಡಾ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ಬರೆದಿದ್ದು, ‘ಗಂಡು ಮಗು ಜನ್ಮವಾಗಿದೆ. ಜೈ ಆಂಜನೇಯ’ ಎಂದಿದ್ದಾರೆ. ಚಿರು ಅಗಲುವಿಕೆಯ ನೋವಿನಲ್ಲಿದ್ದ ಕುಟುಂಬಕ್ಕೆ ಈ ಮಗುವಿನ ಆಗಮನ ನಿಜಕ್ಕೂ ಸಂತಸ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ