ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್, ಇಂದ್ರಜಿತ್ ಲಂಕೇಶ್ ನಡುವೆ ನಡೆಯುತ್ತಿರುವ ಆರೋಪ ಪ್ರತ್ಯಾರೋಪಗಳ ಬಗ್ಗೆ ನವರಸನಾಯಕ ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ.
ದರ್ಶನ್ ನಿನ್ನೆ ಮಾತಿನ ಭರದಲ್ಲಿ ನಿರ್ದೇಶಕ ಪ್ರೇಮ್ ಬಗ್ಗೆಯೂ ಕೆಂಡ ಕಾರಿದ್ದರು. ಹೀಗಾಗಿ ಈ ವಿಚಾರ ಎಲ್ಲಿಂದ ಎಲ್ಲಿಗೋ ಹೋಗುತ್ತಿದೆ. ದಯಮಾಡಿ ಮಾಧ‍್ಯಮದವರು ಚಿತ್ರರಂಗದ ವಿಚಾರವನ್ನು ಬೀದಿ ಚರ್ಚೆಗೆ ವಿಷಯವಾಗುವಂತೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಕಲಾವಿದರು ವರ್ಷಕ್ಕೊಮ್ಮೆ ಹೊರಬರುವ ಊರ ದೇವರ ಹಾಗಿರಬೇಕು. ಪ್ರತಿನಿತ್ಯ ಹೊರಬಂದರೆ ದೇವರೂ ಮೌಲ್ಯ ಕಳೆದುಕೊಳ್ಳುತ್ತಾರೆ. ಉದ್ಯಮದ ಹಿರಿಯರು, ವಾಣಿಜ್ಯ ಮಂಡಳಿ ಮಧ್ಯಪ್ರವೇಶಿಸಿ ಒಡೆದ ಮನಗಳ ಒಂದುಗೂಡಿಸಿ ಎಂದು ಜಗ್ಗೇಶ್ ಮನವಿ ಮಾಡಿದ್ದಾರೆ.