ಮೊಮ್ಮಗನ ಜತೆ ಸೈಕ್ಲಿಂಗ್! ಬಯಲಾಯ್ತು ಜಗ್ಗೇಶ್ ಫಿಟ್ನೆಸ್ ಸೀಕ್ರೆಟ್!
ಜಗ್ಗೇಶ್ ಗೆ ಈಗ 55 ವರ್ಷ. ಹಾಗಿದ್ದರೂ ತಮ್ಮ ಪತ್ನಿ ಪರಿಮಳಾ ಮಾಡುವ ಕಟ್ಟುನಿಟ್ಟಿನ ಆಹಾರ ಪದ್ಧತಿ, ವ್ಯಾಯಾಮದಿಂದಾಗಿ ಈಗಲೂ ಯಂಗ್ ಆಗಿ ಕಾಣಿಸುತ್ತೇನೆ ಎಂದು ಜಗ್ಗೇಶ್ ಆಗಾಗ ಹೇಳಿಕೊಳ್ಳುತ್ತಾರೆ. ಇದೀಗ ತಮ್ಮ ಮೊಮ್ಮಗನ ಜತೆ ಸೈಕ್ಲಿಂಗ್ ಮಾಡುವ ಫೋಟೋಗಳನ್ನು ಜಗ್ಗೇಶ್ ಪ್ರಕಟಿಸಿದ್ದು, ತಮ್ಮ ಫಿಟ್ನೆಸ್ ಗೆ ಇದೂ ಕಾರಣ ಎಂದಿದ್ದಾರೆ.