ಅಭಿಮಾನಿ ಕೊಟ್ಟ ಉಡುಗೊರೆಯಿಂದ ಭಾವುಕರಾದ ನಟ ಜಗ್ಗೇಶ್

ಮಂಗಳವಾರ, 19 ಮೇ 2020 (10:01 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಗೆ ಅಭಿಮಾನಿಯೊಬ್ಬರು ಅಮೂಲ್ಯವಾದ ಉಡುಗೊರೆ ನೀಡಿದ್ದಾರೆ. ಈ ಉಡುಗೊರೆ ನೋಡಿ ಜಗ್ಗೇಶ್ ಭಾವುಕರಾಗಿದ್ದಾರೆ. ಅಷ್ಟಕ್ಕೂ ಅಭಿಮಾನಿ ಕೊಟ್ಟ ಉಡುಗೊರೆ ಏನು ಗೊತ್ತಾ?


ಎಲ್ಲರಿಗೂ ಗೊತ್ತಿರುವ ಹಾಗೆ ಜಗ್ಗೇಶ್ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತ. ಆಗಾಗ ರಾಯರ ಮಠಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಏನೇ ಮಾಡಿದರೂ ಅದು ರಾಯರ ಕೃಪೆ ಎಂದೇ ಹೇಳಿಕೊಳ್ಳುತ್ತಾರೆ.

ಇಂತಿಪ್ಪ ನವರಸನಾಯಕನಿಗೆ ಅಭಿಮಾನಿಯೊಬ್ಬರು ರಾಘವೇಂದ್ರ ಸ್ವಾಮಿಗಳ ಬೃಹತ್ ಫೋಟೋವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ಕಣ್ಣಿಗೊತ್ತಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಜಗ್ಗೇಶ್ ನನಗಿದು ಅತೀ ದೊಡ್ಡ ಉಡುಗೊರೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಅಲ್ಲದೆ ತಮಗೆ ಉಡುಗೊರೆಯಿತ್ತ ಅಭಿಮಾನಿಗೂ ಧನ್ಯವಾದ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ