ದರ್ಶನ್ ಭೇಟಿಯಾದ ಬೆನ್ನಲ್ಲೇ ಡೆವಿಲ್‌ ಸಿನಿಮಾದ ಬಿಗ್‌ಅಪ್ಡೇಟ್‌ ಕೊಟ್ಟ ವಿಜಯಲಕ್ಷ್ಮಿ

Sampriya

ಬುಧವಾರ, 20 ಆಗಸ್ಟ್ 2025 (11:42 IST)
Photo Credit X
ಬೆಂಗಳೂರು: ದರ್ಶನ್ ಅರೆಸ್ಟ್ ಆಗದಿದ್ದರೆ ಈಗಾಗಲೇ ಡೆವಿಲ್ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಬೇಕಿತ್ತು. ಆದರೆ ಇದೀಗ ಸಿನಿಮಾದ  ಇದ್ರೇ ನಿಮ್ದಿಯಾಗ್ ಇರ್ಬೇಕ್‌ ಮೊದಲ ಹಾಡಿನ ಬಿಡುಗಡೆ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಿಗ್‌ ಅಪ್ಡೇಟ್ ನೀಡಿದ್ದಾರೆ. 

ಅದರಲ್ಲಿ ಇದೇ ತಿಂಗಳ 24ರಂದು ಬೆಳಗ್ಗೆ 10.05ಕ್ಕೆ ಬಿಡುಗಡೆ ಮಾಡುವುದಾಗಿ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. 

ರೇಣುಕಾಸ್ವಾಮಿ ಪ್ರಕರಣ ಸಂಬಂಧ ಜಾಮೀನು ರದ್ದಾಗಿದ್ದರಿಂದ ನಟ ದರ್ಶನ್ ಮತ್ತೇ ಜೈಲು ಸೇರಿದ್ದಾರೆ. ಅವರ ಬಹುನಿರೀಕ್ಷಿತ ಡೆವಿಲ್ ಸಿನಿಮಾದ ಶೂಟಿಂಗ್ ಮುಗಿದು ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. 

ದರ್ಶನ್ ಈ ಪ್ರಕರಣದಲ್ಲಿ ಭಾಗಿಯಾಗದಿದ್ದರೆ ಈಗಾಗಲೇ ಈ ಸಿನಿಮಾ ಬಿಡುಗಡೆಯಾಗಬೇಕಿತ್ತು. ಜಾಮೀನು ಮೂಲಕ ಹೊರಬಂದ್ಮೇಲೆ ದರ್ಶನ್ ಸಿನಿಮಾದ ಉಳಿದ ಶೂಟಿಂಗ್‌ ಅನ್ನು ಮುಗಿಸಿದ್ದರು. ಮೊದಲ ಹಾಡು ಆಗಸ್ಟ್‌ 15ರಂದು ಬಿಡುಗಡೆಯಾಗಬೇಕಿದ್ದ ಹಿಂದಿನ ದಿವಸ ದರ್ಶನ್ ಮತ್ತೇ ಜೈಲು ಸೇರುವಂತಾಯಿತು. 

ಇದರಿಂದ ಹಾಡು ಬಿಡುಗಡೆ ದಿನವನ್ನು ಮುಂದೂಡಲಾಯಿತು. ಜೈಲಿನಿಂದಲೇ ತನ್ನ ಸಿನಿಮಾ ಸಂಬಂಧ ಪತ್ನಿ ಮೂಲಕ ಸಂದೇಶ ಕಳುಹಿಸಿದ, ಸಿನಿಮಾಗೆ ಹಾರೈಸುವಂತೆ ಕೇಳಿಕೊಮಡಿದ್ದರು. ಇದೀಗ ದರ್ಶನ್ ಸಾಮಾಜಿಕ ಜಾಲತಾಣವನ್ನು ಪತ್ನಿ ವಿಜಯಲಕ್ಷ್ಮಿ ನೋಡಿಕೊಳ್ಳುತ್ತಿದ್ದು, ಅವರ ಮುಂದಿನ ಸಿನಿಮಾ ಬಿಡುಗಡೆ ದಿನಾಂಕ ಬಗ್ಗೆ ಅಪ್ಡೇಟ್ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ