‘ಮಠ’ ಜಾಗದಲ್ಲೇ ರಾಘವೇಂದ್ರಸ್ಟೋರ್ಸ್ ಚಿತ್ರೀಕರಣ: ಹಳೆಯ ನೆನಪಿಗೆ ಜಾರಿದ ಜಗ್ಗೇಶ್
ಮೊದಲ ಹಂತದ ಚಿತ್ರೀಕರಣ ಪೂರೈಸಿರುವ ಚಿತ್ರತಂಡ ಈಗ ಮಲೆನಾಡಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸುತ್ತಿದೆ. ಇದೀಗ ತೀರ್ಥಹಳ್ಳಿಯ ಹಳೆಯ ಮನೆಯೊಂದರಲ್ಲಿ ಚಿತ್ರೀಕರಣ ನಡೆಯುತ್ತಿದೆ.
ಈ ಮನೆಯಲ್ಲಿಯೇ ಅಂದು ಜಗ್ಗೇಶ್ ಗೆ ಹೊಸ ಬ್ರೇಕ್ ಕೊಟ್ಟ ಮಠ ಸಿನಿಮಾ ಚಿತ್ರೀಕರಣವಾಗಿತ್ತಂತೆ. ಇದಾಗಿ 16 ವರ್ಷಗಳ ಬಳಿಕ ಮತ್ತೆ ಅದೇ ಮನೆಯಲ್ಲಿ ಶೂಟಿಂಗ್ ನಡೆಯುತ್ತಿದೆ ಎಂದು ಜಗ್ಗೇಶ್ ಹಳೆಯ ದಿನವನ್ನು ಮೆಲುಕು ಹಾಕಿಕೊಂಡಿದ್ದಾರೆ.