ಧಾವಂತದಲ್ಲಿ ಶೂಟಿಂಗ್ ಮುಗಿಸುತ್ತಿರುವ ಕ್ರಾಂತಿ ತಂಡ
ಚಾಲೆಂಜಿಂಗ್ ಸ್ಟಾರ್ ದರ್ಶನ್-ರಚಿತಾ ರಾಂ ಪ್ರಮುಖ ಪಾತ್ರದಲ್ಲಿರುವ ಕ್ರಾಂತಿ ಪ್ಯಾನ್ ಇಂಡಿಯಾ ಸಿನಿಮಾದ ಶೂಟಿಂಗ್ ಈಗಾಗಲೇ ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಶೂಟಿಂಗ್ ನಡೆದಿದೆ.
ಈಗಾಗಲೇ ಅರ್ಧದಷ್ಟು ಚಿತ್ರೀಕರಣ ಮುಗಿದಿದ್ದು, ಆದಷ್ಟು ಬೇಗನೇ ಚಿತ್ರೀಕರಣ ಮುಗಿಸಲು ಚಿತ್ರತಂಡ ತಯಾರಿ ನಡೆಸಿದೆಯಂತೆ. ಒಂದು ವೇಳೆ ಕೊರೋನಾ ಅಬ್ಬರ ಹೆಚ್ಚಾಗಿ ಚಿತ್ರೀಕರಣ ಬಂದ್ ಆದರೂ ಅದಕ್ಕಿಂತ ಮೊದಲು ಹೆಚ್ಚಿನ ಚಿತ್ರೀಕರಣ ಮುಗಿಸಿದರೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸಹಾಯವಾಗುತ್ತದೆ ಎಂಬುದು ಚಿತ್ರತಂಡದ ಲೆಕ್ಕಾಚಾರ.