ಮ್ಯಾಟ್ನಿಯಲ್ಲಿ ನಾವಿಬ್ರು ಇದ್ರೆ...! ನೀನಾಸಂ ಸತೀಶ್ ಜೊತೆಗೆ ವೈರಲ್ ಆಯ್ತು ರಚಿತಾ ರಾಂ ಫೋಟೋ!
ರಚಿತಾ ರಾಂ ಸತೀಶ್ ಜೊತೆಗಿರುವ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದು, ಆಕಾಶದಲ್ಲಿ ಮೋಡ ಇದ್ರೆ ಮಳೆ ಬತ್ತದೆ, ಚಿತ್ರಮಂದಿರದಲ್ಲಿ ಜನ ಇದ್ರೆ ಹಣ ಬತ್ತದೆ, ಮ್ಯಾಟ್ನಿ ಸಿನಿಮಾದಲ್ಲಿ ನಾವಿದ್ರೆ ಒಂದು ಕಳೆ ಬತ್ತದೆ..! ಎಂದು ಡೈಲಾಗ್ ಬರೆದುಕೊಂಡಿದ್ದಾರೆ.
ಅಯೋಗ್ಯ ಬಳಿಕ ಮತ್ತೆ ಈ ಜೋಡಿ ಒಂದಾಗುತ್ತಿದ್ದು, ಮ್ಯಾಟ್ನಿ ಎನ್ನುವ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಆರಂಭವಾಗಿದ್ದು, ಈ ಹಿನ್ನಲೆಯಲ್ಲಿ ರಚಿತಾ ಈ ರೀತಿ ಫೋಟೋ ಹಂಚಿಕೊಂಡಿದ್ದಾರೆ.