ಡಾಕ್ಟರೇಟು ಪಡೆದ ಪತ್ನಿಯನ್ನು ಜಗ್ಗೇಶ್ ಕರೆದುಕೊಂಡು ಹೋಗಿದ್ದಾದರೂ ಎಲ್ಲಿಗೆ?!
ಸೋಮವಾರ, 21 ಜನವರಿ 2019 (09:19 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಪತ್ನಿ ಪರಿಮಳಾ ಜಗ್ಗೇಶ್ ಗೆ ಸಕ್ಕರೆ ಖಾಯಿಲೆ ನಿಯಂತ್ರಣ ಕುರಿತಾದ ಆವಿಷ್ಕಾರಕ್ಕೆ ಡಾಕ್ಟರೇಟು ಗೌರವ ಸಿಕ್ಕಿದೆ. ಪತ್ನಿಯ ಸಾಧನೆಯಿಂದ ಜಗ್ಗೇಶ್ ಸಹಜವಾಗಿಯೇ ಖುಷಿಯಾಗಿದ್ದಾರೆ.
ಮನೆಯವರ ವಿರೋಧ ಕಟ್ಟಿಕೊಂಡು 36 ವರ್ಷಗಳ ಹಿಂದೆ ಪರಿಮಳಾರನ್ನು ಮದುವೆಯಾದಾಗ ಆಕೆಗಿನ್ನೂ ಚಿಕ್ಕ ವಯಸ್ಸು. ನನ್ನನ್ನು ಮದುವೆಯಾದ ಕಾರಣಕ್ಕೆ ಆಕೆಯ ಓದಿಗೆ, ಸಾಧನೆಗೆ ತೊಂದರೆಯಾಗಬಾರದು ಎಂದು ಜಗ್ಗೇಶ್ ಯಾವತ್ತೂ ಹೇಳುತ್ತಿದ್ದರು.
ಅವರ ಆ ಕನಸನ್ನು ಇದೀಗ ನನಸು ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಡಾಕ್ಟರೇಟು ಪಡೆದ ಖುಷಿಯಲ್ಲಿ ಸೀದಾ ತಮ್ಮ ತವರು ಗ್ರಾಮಕ್ಕೆ ತೆರಳಿದ ಜಗ್ಗೇಶ್ ಅಪ್ಪ-ಅಮ್ಮನ ಸಮಾಧಿ ಮುಂದೆ ಡಾಕ್ಟರೇಟ್ ಪದವಿಯ ಸರ್ಟಿಫಿಕೇಟ್, ಟ್ರೋಫಿಗಳನ್ನಿರಿಸಿ ವಂದನೆ ಸಲ್ಲಿಸಿದ್ದಾರೆ. ಜತೆಗೆ ಅಪ್ಪ ಅಮ್ಮ ಬದುಕಿದ್ದರೆ ಈಗ ಎಷ್ಟು ಖುಷಿಪಡುತ್ತಿದ್ದರು ಎಂದು ನೆನೆಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ