ಐವರು ಹುಡುಗಿಯರ ಜತೆ ಗಾಳಿಪಟ ಹಾರಿಸ್ತಾರೆ ಯೋಗರಾಜ ಭಟ್ಟರು

ಶನಿವಾರ, 19 ಜನವರಿ 2019 (10:21 IST)
ಬೆಂಗಳೂರು: ಪಂಚತಂತ್ರ ಸಿನಿಮಾ ಮುಗಿಸಿ ಬಿಡುಗಡೆ ಮಾಡುವ ಮೊದಲೇ ಯೋಗರಾಜ ಭಟ್ಟರು ಮತ್ತೊಂದು ಸಿನಿಮಾ ಮಾಡುತ್ತಿರುವ ಸುದ್ದಿಕೊಟ್ಟಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿದ್ದ ಗಾಳಿಪಟ ಸಿನಿಮಾ ಭಟ್ಟರಿಗೆ ಒಳ್ಳೆಯ ಹೆಸರು ತಂದುಕೊಟ್ಟ ಸಿನಿಮಾ. ಇದೀಗ ಗಾಳಿಪಟ2 ಸಿನಿಮಾ ಮಾಡಲು ಭಟ್ಟರು ಹೊರಟಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ಮೂವರು ನಾಯಕರಿಗೆ ಐವರು ನಾಯಕಿಯರಿರುತ್ತಾರೆ. ಶರಣ್, ಲೂಸಿಯಾ ಪವನ್ ಮತ್ತು ರಿಷಿ ನಾಯಕರು. ಇವರಿಗೆ ಒಬ್ಬ ಚೈನೀಸ್ ಹುಡುಗಿ ಸೇರಿದಂತೆ ಐವರು ನಾಯಕಿಯರು. ಈಗಾಗಲೇ ಸೋನಲ್ ಮೊಂತೆರೋ, ಶರ್ಮಿಳಾ ಮಾಂಡ್ರೆ ಮತ್ತು ಮುಂಬೈನ ಮಾಡೆಲ್ ಒಬ್ಬರನ್ನು ನಾಯಕಿಯಾಗಿ ಆಯ್ಕೆ ಮಾಡಿರುವ ಭಟ್ಟರು ಚೈನೀಸ್ ಹುಡುಗಿಯ ಪಾತ್ರಕ್ಕಾಗಿ ತಲಾಷ್ ಆರಂಭಿಸಿದ್ದಾರೆ.

ಈಗಾಗಲೇ ಸಿನಿಮಾದ ಪ್ರಿಪ್ರೊಡಕ್ಷನ್ ಕೆಲಸಗಳು ಶುರುವಾಗಿದೆ. ಅರ್ಜುನ್ ಜನ್ಯಾ ಸಂಗೀತ ನಿರ್ದೇಶನ ಚಿತ್ರಕ್ಕಿರಲಿದೆ. ಗಾಳಿಪಟ ಉತ್ಸವದ ಕೆಲವು ದೃಶ್ಯಗಳನ್ನೂ ಸೆರೆ ಹಿಡಿಯಲಾಗಿದೆಯಂತೆ. ಎಲ್ಲಾ ಸರಿಹೋದರೆ ಇನ್ನು ಎರಡು ತಿಂಗಳಲ್ಲಿ ಚಿತ್ರೀಕರಣ ಶುರುವಾಗಲಿದೆ.


















ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ