ದರ್ಶನ್-ರಶ್ಮಿಕಾ ಡ್ಯುಯೆಟ್ ಗೆ ಪ್ರೇಕ್ಷಕರು ಫಿದಾ

ಭಾನುವಾರ, 20 ಜನವರಿ 2019 (09:08 IST)
ಬೆಂಗಳೂರು: ಯಜಮಾನ ಚಿತ್ರದ ಶಿವನಂದಿ ಹಾಡು ಈಗಾಗಲೇ ಬಿಡುಗಡೆಯಾಗಿ ಯೂ ಟ್ಯೂಬ್ ನಲ್ಲಿ ಭರ್ಜರಿ ಹಿಟ್ ಆಗಿದೆ. ಇದೀಗ ಎರಡನೇ ಹಾಡು ನಿನ್ನೆ ಬಿಡುಗಡೆಯಾಗಿದ್ದು, ಇದನ್ನೂ ಪ್ರೇಕ್ಷಕ ಒಪ್ಪಿಕೊಂಡಿದ್ದಾನೆ.


ಶಿವನಂದಿ ಮಾಸ್ ಹಾಡಾದರೆ ಎರಡನೇ ಹಾಡು ಲವ್ ಸಾಂಗ್. ಸೋನು ನಿಗಂ ಮತ್ತು ಶ್ರೇಯಾ ಘೋಷಾಲ್ ಮ್ಯಾಜಿಕಲ್ ಧ್ವನಿಯಲ್ಲಿ ಮೂಡಿ ಬಂದಿರುವ ‘ಒಂದು ಮುಂಜಾನೆ’ ಎಂಬ ಮೆಲೊಡಿ ಹಾಡು ಈಗ ಹಿಟ್ ಆಗಿದೆ.

ಇದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆಗೆ ನಾಯಕಿ ರಶ್ಮಿಕಾ ಮಂದಣ್ಣ ವಿದೇಶದ ಸುಂದರ ತಾಣಗಳಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಹಾಡನ್ನು ಈಗಾಗಲೇ ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ