ಪುತ್ರನ ದಾಳಿ ಬಗ್ಗೆ ಜಗ್ಗೇಶ್ ಏನಂತಾರೆ?

ಸೋಮವಾರ, 14 ಆಗಸ್ಟ್ 2017 (16:23 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಹಿರಿಯ ಪುತ್ರ ಗುರುರಾಜ್ ಮೇಲೆ ಇಂದು ಬೆಳಿಗ್ಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದ ಘಟನೆ ವರದಿಯಾಗಿತ್ತು. ಈ ಬಗ್ಗೆ  ಜಗ್ಗೇಶ್ ನೀಡಿದ ಪ್ರತಿಕ್ರಿಯೆ ಏನು ಗೊತ್ತಾ?

 
ಟ್ವಿಟರ್ ನಲ್ಲಿ ಸಕ್ರಿಯರಾಗಿರುವ ಜಗ್ಗೇಶ್ ಘಟನೆ ಬಗ್ಗೆ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ವಿವರಣೆ ನೀಡಿದ್ದಾರೆ. ‘ದೇವರ ದಯೆಯಿಂದ ಪಾರಾಗಿದ್ದಾನೆ ಗುರು. ಮಾಧ್ಯಮ ಮಿತ್ರರಿಗೆ,  ಪ್ರೀತಿ ಪಾತ್ರರಿಗೆ ಧನ್ಯವಾದ. ಜೇನು ಗೂಡಿಗೆ ಕೈ ಹಾಕಿದ್ದಾನೆ. ಪಾಪಿ! ಪ್ರತಿಫಲ ಉಣ್ಣುತ್ತಾನೆ’ ಎಂದು ಸಂದೇಶ ಬರೆದಿದ್ದಾರೆ.

ಇಂದು ಬೆಳಿಗ್ಗೆ ಆರ್ ಟಿ ನಗರದಲ್ಲಿ ಜಗ್ಗೇಶ್ ಪುತ್ರ ಗುರುರಾಜ್ ಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದರು. ಈ ಬಗ್ಗೆ  ಪೊಲೀಸ್ ದೂರು  ದಾಖಲಾಗಿದೆ. ಹೊಟ್ಟೆಗೆ ದುಷ್ಕರ್ಮಿಗಳು ಚಾಕುವಿನಿಂದ ತಿವಿಯುತ್ತಿದ್ದರು. ಆದರೆ ಜಂಪ್ ಮಾಡಿದ ಕಾರಣ ಅದೃಷ್ಟವಶಾತ್ ತೊಡೆಗೆ ತಗುಲಿದ ಕಾರಣ ಪ್ರಾಣಾಪಾಯದಿಂದ ಪಾರಾದೆ ಎಂದು ಗುರುರಾಜ್ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಇದನ್ನೂ ಓದಿ.. ಕಾಂಗ್ರೆಸ್ ಹೊಣೆ ಪ್ರಿಯಾಂಕ ಹೆಗಲಿದೆ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ