ನವರಸನಾಯಕ ಜಗ್ಗೇಶ್ ‘ರಂಗನಾಯಕ’ ಶುರು

ಮಂಗಳವಾರ, 17 ಆಗಸ್ಟ್ 2021 (09:07 IST)
ಬೆಂಗಳೂರು: ನವರಸನಾಯಕ ಜಗ್ಗೇಶ್-ಗುರುಪ್ರಸಾದ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ‘ರಂಗನಾಯಕ’ ಸಿನಿಮಾ ಶೂಟಿಂಗ್ ಆರಂಭವಾಗಿದೆ.


ಮಠ ಸಿನಿಮಾ ಬಳಿಕ ಗುರುಪ್ರಸಾದ್ ನಿರ್ದೇಶನದಲ್ಲಿ ಜಗ್ಗೇಶ್ ಅಭಿನಯಿಸುತ್ತಿರುವ ಸಿನಿಮಾ ಇದಾಗಿದೆ. ಈಗಾಗಲೇ ಪಕ್ಕಾ ರಾಜನ ಲುಕ್ ನಲ್ಲಿರುವ ಜಗ್ಗೇಶ್ ಲುಕ್ ಕೂಡಾ ಬಿಡುಗಡೆಯಾಗಿತ್ತು.

ಇದೂ ಕೂಡಾ ಕಾಮಿಡಿ ಎಂಟರ್ ಟೈನರ್ ಆಗಿರಲಿದೆ. ಲಾಕ್ ಡೌನ್ ಗೆ ಮೊದಲು ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿತ್ತು. ಇದೀಗ ಜಗ್ಗೇಶ್ ತೋತಾಪುರಿ ಸಿನಿಮಾ ಚಿತ್ರೀಕರಣ ಮುಗಿಸಿದ್ದು, ‘ರಂಗನಾಯಕ’ನ ಸೆಟ್ ಗೆ ಬಲಗಾಲಿಟ್ಟು ಬಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ