ಬಿಡುಗಡೆಗೆ ಸಜ್ಜಾದ ಜಗ್ಗೇಶ್ ‘ತೋತಾಪುರಿ’

ಶುಕ್ರವಾರ, 30 ಜುಲೈ 2021 (12:19 IST)
ಬೆಂಗಳೂರು: ನವರಸನಾಯಕ ಜಗ್ಗೇಶ್‍-ವಿಜಯ್ ಪ್ರಸಾದ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ತೋತಾಪುರಿ ಸಿನಿಮಾದ ಡಬ್ಬಿಂಗ್ ಭಾಗ ಮುಕ್ತಾಯವಾಗಿದೆ.


ಜಗ್ಗೇಶ್ ಕಳೆದೊಂದು ವಾರದಿಂದ ಡಬ್ಬಿಂಗ್ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದರು. ಇದೀಗ ಡಬ್ಬಿಂಗ್ ಕೆಲಸಗಳು ಮಗಿದಿದ್ದು, ಸಿನಿಮಾ ಬಿಡುಗಡೆ ಹಂತಕ್ಕೆ ಬಂದು ತಲುಪಿದೆ.
ನೀರ್ ದೋಸೆ ಬಳಿಕ ವಿಜಯ್ ಪ್ರಸಾದ್-ಜಗ್ಗೇಶ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಎರಡನೆಯ ಸಿನಿಮಾವಿದು. ಈ ಸಿನಿಮಾ ಎರಡು ಭಾಗಗಳಾಗಿ ಚಿತ್ರೀಕರಣಗೊಂಡಿದ್ದು, ಇದೇ ಮೊದಲ ಬಾರಿಗೆ ಈ ಪ್ರಯೋಗ ನಡೆದಿದೆ. ಜಗ್ಗೇಶ್ ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ