ಜಾಗ್ವಾರ್ ಸಿನಿಮಾ 20 ಕೋಟಿ ಕಲೆಕ್ಷನ್?
ಬೆಂಗಳೂರು: ಎಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಪ್ರಥಮ ಬಾರಿಗೆ ನಾಯಕನಾಗಿ ಅಭಿನಯಿಸಿದ “ಜಾಗ್ವಾರ್” ಚಿತ್ರ 20 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ.
ಅದ್ಧೂರಿ ವೆಚ್ಚದಲ್ಲಿ ಕುಮಾರಸ್ವಾಮಿ ತಮ್ಮ ಮಗನನ್ನು ಸಿನಿಮಾ ಲೋಕಕ್ಕೆ ಪರಿಚಯಿಲು ಚಿತ್ರ ಮಾಡಿದ್ದರು. ಇದು ಏಕಕಾಲಕ್ಕೆ ತೆಲುಗು ಮತ್ತು ಕನ್ನಡದಲ್ಲಿ ಬಿಡುಗಡೆಯಾಗಿತ್ತು. ಈ ದೀಪಾವಳಿಗೆ ಅಮೆರಿಕಾದಲ್ಲೂ ತೆರೆ ಕಾಣಲಿದೆ.
ಆದರೆ ಈ ವಾರಾಂತ್ಯಕ್ಕೆ ಕನ್ನಡದಲ್ಲಿ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಜಾಗ್ವಾರ್ ಕಲೆಕ್ಷನ್ ಗೆ ಹೊಡೆತ ಬೀಳಬಹುದೆನ್ನಲಾಗುತ್ತಿದೆ. ಅದೇನೇ ಇರಲಿ ನಿಖಿಲ್ ಗೌಡ ಮಾತ್ರ ತಮ್ಮ ಮೊದಲ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ.