ವಾನ್ ನಲ್ಲೇ ಪ್ಯಾಂಟ್ ಜಿಪ್ ಓಪನ್ ಮಾಡ್ತಿದ್ದ ಜಾನಿ ಮಾಸ್ಟರ್: ಯುವತಿ ಬಿಚ್ಚಿಟ್ಟ ಶಾಕಿಂಗ್ ವಿಚಾರಗಳು

Krishnaveni K

ಮಂಗಳವಾರ, 17 ಸೆಪ್ಟಂಬರ್ 2024 (10:16 IST)
Photo Credit: X
ಹೈದರಾಬಾದ್: ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ವಿರುದ್ಧ ಅವರ ಜೊತೆ ಕೆಲಸ ಮಾಡುತ್ತಿದ್ದ 21 ವರ್ಷದ ಯುವತಿ ರೇಪ್ ಪ್ರಕರಣ ದಾಖಲಿಸಿದ್ದು, ತನ್ನ ವಿರುದ್ಧ ಜಾನಿ ಮಾಸ್ಟರ್ ಮಾಡಿದ್ದ ಕಿರುಕುಳದ ಇಂಚಿಂಚೂ ಬಿಚ್ಚಿಟ್ಟಿದ್ದಾಳೆ.

ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಸೇರಿದಂತೆ ಕನ್ನಡ, ತೆಲುಗು ಸಿನಿಮಾಗಳಲ್ಲಿ ಹಲವು ಸೂಪರ್ ಹಿಟ್ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದ ಜಾನಿ ಮಾಸ್ಟರ್ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಸಹ ನೃತ್ಯಗಾತಿ, 21 ವರ್ಷದ ಯುವತಿ ರಂಗಾರೆಡ್ಡಿ ಜಿಲ್ಲೆಯ ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಹೈದರಾಬಾದ್ ಮತ್ತು ಮುಂಬೈನಲ್ಲಿ ತನ್ನ ಮೇಲೆ ಜಾನಿ ಮಾಸ್ಟರ್ ಅತ್ಯಾಚಾರವೆಸಗಿರುವುದಲ್ಲದೆ, ಪತ್ನಿಯ ಜೊತೆ ಮನೆಗೆ ಬಂದು ಹಲ್ಲೆ ನಡೆಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಅಲ್ಲದೆ, ಮತಾಂತರವಾಗುವಂತೆಯೂ ಜಾನಿ ಮಾಸ್ಟರ್ ಒತ್ತಡ ಹೇರುತ್ತಿದ್ದರು ಎಂದು ಗಂಭೀರ ಆರೋಪವನ್ನು ಯುವತಿ ಮಾಡಿದ್ದಾಳೆ.

ಪ್ರತಿ ದಿನ ಶೂಟಿಂಗ್ ಸಮಯದಲ್ಲಿ ವ್ಯಾನ್ ಗೆ ಬಂದು ಅಲ್ಲೇ ಜಾನಿ ಮಾಸ್ಟರ್ ತನ್ನೆದುರು ಪ್ಯಾಂಟ್ ಜಿಪ್ ಓಪನ್ ಮಾಡಿ ಕಾಮತೃಷೆ ತೀರಿಸಿಕೊಳ್ಳಲು ಬಲವಂತ ಮಾಡುತ್ತಿದ್ದರು. ಬಳಿಕ ಅವಕಾಶ ಸಿಗಬೇಕಾದರೆ ಲೈಂಗಿಕ ತೃಷೆ ತೀರಿಸಬೇಕು ಎಂದು ಬೆದರಿಕೆ ಹಾಕುತ್ತಿದ್ದ. ಮುಂಬೈ ಹೋಟೆಲ್, ಹೈದರಾಬಾದ್ ನಲ್ಲೂ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ