ಕಥೆಗಾಗಿ ಮತ್ತು ಅದರಲ್ಲಿನ ಪಾತ್ರಕ್ಕಾಗಿ ಈಗಿನ ಜಮಾನಾ ಹೀರೋಗಳು ತೂಕ ಹೆಚ್ಚಿಸಿಕೊಳ್ಳುವುದು, ಇಳಿಸಿಕೊಳ್ಳುವುದನ್ನು ಮಾಡುತ್ತಲೇ ಬಂದಿದ್ದಾರೆ. ಟಾಲಿವುಡ್ ಯಂಗ್ ಟೈಗರ್ ಎಂದೇ ಕರೆಸಿಕೊಂಡಿರುವ ಜೂ.ಎನ್ಟಿಆರ್‌ಗಾರು ಈಗ ತಮ್ಮ ಮೈ ತೂಕ ಇಳಿಸಿಕೊಂಡಿದ್ದಾರೆ.
ಈ ಹಿಂದೆ ಟೆಂಪರ್ ಚಿತ್ರಕ್ಕಾಗಿ ಅವರು ಬಾಡಿ ಲಾಂಗ್ವೇಜ್ ಬದಲಾಯಿಸಿಕೊಂಡಿದ್ದರು. ಆ ಸಿನಿಮಾದಲ್ಲಿ ಮೊದಲ ಬಾರಿಗೆ ಶರ್ಟ್ ಬಿಚ್ಚಿ ತಮ್ಮ ಅಂಗಸೌಷ್ಠವ ತೋರಿಸಿದ್ದರು. ಇತ್ತೀಚೆಗೆ ತೆರೆಕಂಡ ನಾನ್ನಕು ಪ್ರೇಮತೋ ಚಿತ್ರಕ್ಕಾಗಿ ಗಡ್ಡ ಬಿಟ್ಟಿದ್ದರು. ಆ ಸ್ಟೈಲ್ ಎಲ್ಲರಿಗೂ ಮೆಚ್ಚುಗೆ ಆಗಿತ್ತು, ಮುಖ್ಯವಾಗಿ ಅಭಿಮಾನಿಗಳಿಗೆ.
ಈ ಹಿಂದೊಮ್ಮೆ ಎನ್ಟಿಆರ್ ಲಿಪೋಸಕ್ಸನ್ ಎಂಬ ಬೊಜ್ಜು ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಜ.10 ಚಿತ್ರೀಕರಣಕ್ಕೆ ಚಾಲನೆ ನೀಡಲಾಗುತ್ತಿದೆ. ಈ ಚಿತ್ರಕ್ಕೆ ಜೈ ಲವಕುಶ ಎಂಬ ಶೀರ್ಷಿಕೆ ಇಡಲಾಗಿದೆ. ರಾಶಿ ಖನ್ನಾ, ನಿವೇದಾ ಥಾಮಸ್ ಚಿತ್ರದ ಹೀರೋಯಿನ್‍ಗಳು. ಇನ್ನೊಬ್ಬ ನಾಯಕಿಯಾಗಿ ಹುಡುಕಾಟ ನಡೆಸಿದ್ದಾರೆ.