ವಿದೇಶದಲ್ಲಿ 'ಸು ಫ್ರಮ್ ಸೋ' ನೋಡಲು ಕಾಯುತ್ತಿರುವ ಕನ್ನಡಭಿಮಾನಿಗಳಿಗೆ ಗುಡ್‌ನ್ಯೂಸ್‌

Sampriya

ಮಂಗಳವಾರ, 29 ಜುಲೈ 2025 (17:33 IST)
Photo Credit X
ಬೆಂಗಳೂರು: ಸದ್ದಿಲ್ಲದೆ ಥಿಯೇಟರ್‌ಗೆ ಬಂದು ಇಂದು ದೇಶದಾದ್ಯಂತ ಸುದ್ದಿಯಾಗಿರುವ ರಾಜ್‌ ಬಿ ಶೆಟ್ಟಿನಿರ್ಮಾಣದ ʼಸು ಫ್ರಮ್‌ ಸೋ’ ಸಿನಿಮಾ ಕರ್ನಾಟಕದಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ವೀಕೆಂಡ್‌ನಲ್ಲಿ ಸಿನಿಮಾ ಪ್ರಿಯರು ಸಿನಿಮಾ ಟಿಕೆಟ್ ಸಿಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.  

ರಾಜ್ಯದಲ್ಲಿ ಸಿನಿಮಾದ ಬಗೆಗಿನ ಸಿನಿಮಾ ರಿಯ್ಯಾಕ್ಷನ್ ನೋಡಿ ಹೊರ ದೇಶದಲ್ಲಿರುವ ಕನ್ನಡಿಗರಿಂದ ಸಿನಿಮಾ ಬಿಡುಗಡೆ ಭಾರೀ ಡಿಮ್ಯಾಂಡ್ ವ್ಯಕ್ತವಾಗುತ್ತಿದೆ. ಇದೀಗ ದೇಶದಿಂದ ವಿದೇಶಕ್ಕೂ 'ಸು ಫ್ರಮ್‌ ಸೋʼ ದಾಪುಗಾಲಿಡುತ್ತಿದೆ.

ಮೊದಲ ಭಾರೀ ಆ್ಯಕ್ಷನ್ ಕಟ್‌ ಹೇಳಿದ ತುಳು ರಂಗಭೂಮಿಯಲ್ಲಿ ಮಿಂಚಿರುವ ಜೆಪಿ ತುಮಿನಾಡ್‌ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. 

ಬಾಕ್ಸಾಫೀಸ್‌ನಲ್ಲಿ ಇದುವರೆಗೆ 10 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ. ಸೋಮವಾರ (ಜು.28) 3.55 ಕೋಟಿ ರೂ. ಗಳಿಕೆ ಕಂಡಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ. 

ಕನ್ನಡದಲ್ಲಿ ಮೋಡಿ ಮಾಡಿದ ಬಳಿಕ ʼಸು ಫ್ರಮ್‌ ಸೋʼ ಈಗ ದೇಶ – ವಿದೇಶದ ಥಿಯೇಟರ್‌ನಲ್ಲಿ ರಿಲೀಸ್‌ ಆಗಲು ಸಿದ್ದವಾಗಿದೆ.

ಇನ್ನು ಭಾರತದಲ್ಲಿ ಮಾತ್ರವಲ್ಲದೆ ವಿದೇಶದ ಥಿಯೇಟರ್‌ನಲ್ಲಿ ಸಿನಿಮಾ ರಿಲೀಸ್‌ ಆಗಲಿದೆ. ಜರ್ಮನಿಯ ಥಿಯೇಟರ್ ಲಿಸ್ಟ್‌ನ್ನು ರಾಜ್‌ ಬಿ ಶೆಟ್ಟಿ ಹಂಚಿಕೊಂಡಿದ್ದಾರೆ. ಇನ್ನು ಯುಕೆಯಲ್ಲಿ Dream ZE ಈ ಚಿತ್ರವನ್ನು ರಿಲೀಸ್ ಮಾಡುತ್ತಿದೆ. ರಿಲೀಸ್‌ ಡೇಟ್‌ ಇನ್ನಷ್ಟೇ ಅನೌನ್ಸ್‌ ಆಗಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ