ಬೆಂಗಳೂರು: ಅಶ್ಲೀಲ ಮೆಸೇಜ್ ಹಾಗೂ ಜೀವ ಬೆದರಿಕೆ ಸಂಬಂಧ ದರ್ಶನ್ ಫ್ಯಾನ್ಸ್ ವಿರುದ್ಧ ಪೊಲೀಸ್ ಕಮಿಷನರ್‌ಗೆ ದೂರು ಕೊಟ್ಟ ನಟ ರಮ್ಯಾ ಪರ ನಟ ಚೇತನ್ ಕುಮಾರ್ ನಿಂತಿದ್ದಾರೆ.
ಪೋಸ್ಟ್ ಮಾಡಿದವರ ವಿರುದ್ಧ ಕ್ರಮಕ್ಕೆ ಚೇತನ್ ಆಗ್ರಹಿಸಿದ್ದಾರೆ. ಇನ್ನೂ ತಮ್ಮ ನಡೆಯವನ್ನು ಬೆಂಬಲಿಸಿದ್ದಕ್ಕೆ ನಟಿ ರಮ್ಯಾ ಅವರು ಧನ್ಯವಾದ ಸಲ್ಲಿಸಿದ್ದಾರೆ.
ನಟಿ ರಮ್ಯ ಅವರ ವಿರುದ್ಧ ನಡೆಯುತ್ತಿರುವ ಮಹಿಳಾ-ವಿರೋಧಿ ಮತ್ತು ಅಶ್ಲೀಲ ಟ್ರೋಲಿಂಗ್ ವಿರುದ್ಧ ಅವರ ಹೋರಾಟಕ್ಕೆ ಫೈರ್ #FIRE ಸಂಸ್ಥೆ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ನಟಿ ರಮ್ಯಾ ಪರವಾಗಿ ಈಗಾಗಲೇ ನಟ ಶಿವರಾಜ್‌ಕುಮಾರ್ ದಂಪತಿ, ನಟ ಪ್ರಥಮ್ ಸೇರಿದಂತೆ ಹಲವರು ಬೆಂಬಲ ಸೂಚಿಸಿದ್ದಾರೆ.