ಸೈಮಾ ಅವಾರ್ಡ್ಸ್ ನಲ್ಲಿ ಕನ್ನಡದಲ್ಲೇ ಮಾತನಾಡಿದ ಜ್ಯೂ.ಎನ್ ಟಿಆರ್-ರಿಷಬ್ ಶೆಟ್ಟಿ

ಶನಿವಾರ, 16 ಸೆಪ್ಟಂಬರ್ 2023 (17:50 IST)
Photo Courtesy: Twitter
ದುಬೈ: ಪ್ರತಿಷ್ಠಿತ ಸೈಮಾ ಅವಾರ್ಡ್ಸ್ ಸಮಾರಂಭ ನಿನ್ನೆ ದುಬೈನಲ್ಲಿ ನಡೆದಿದೆ. ಕನ್ನಡ ಮತ್ತು ತೆಲುಗು ಚಿತ್ರದ ಸಾಧಕರಿಗೆ ನಿನ್ನೆ ಪ್ರಶಸ್ತಿ ನೀಡಲಾಗಿದೆ.

ಈ ವರ್ಣರಂಜಿತ ಕಾರ್ಯಕ್ರಮಕ್ಕೆ ಕನ್ನಡ, ತೆಲುಗು ಚಿತ್ರರಂಗದ ಸ್ಟಾರ್ ಕಲಾವಿದರು ಆಗಮಿಸಿದ್ದರು. ಈ ವೇಳೆ ನಿರೂಪಕ ಅಕುಲ್ ಬಾಲಾಜಿ ಮನವಿ ಮೇರೆಗೆ ಜ್ಯೂ.ಎನ್ ಟಿಆರ್ ಮತ್ತು ರಿಷಬ್ ಶೆಟ್ಟಿ ಕನ್ನಡದಲ್ಲೇ ಮಾತನಾಡಿದ್ದು ಎಲ್ಲರ ಗಮನ ಸೆಳೆಯಿತು.

ಜ್ಯೂ. ಎನ್ ಟಿಆರ್ ತಾಯಿ ರಿಷಬ್ ಶೆಟ್ಟಿ ತವರು ಕುಂದಾಪುರದವರು. ಇದೇ ನಂಟಿನ ಬಗ್ಗೆ ಇಬ್ಬರೂ ಮಾತನಾಡಿದ್ದಾರೆ. ನಮ್ಮ ತಾಯಿ ಜೊತೆ ನಾನು ಹೀಗೇ ಮಾತನಾಡುತ್ತೇನೆ ಎಂದು ಕನ್ನಡದಲ್ಲಿ ತಾರಕ್ ಹೇಳಿದರೆ, ನೀವು ನಮ್ಮ ಊರು ಕುಂದಾಪುರದವರಾಗಿದ್ದರಿಂದ ನಮಗೆ ತೆಲುಗಿನವರು ಎನಿಸುವುದಿಲ್ಲ, ನಮ್ಮವರೇ ಎನಿಸುತ್ತದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ