ಕಿಚ್ಚ ಸುದೀಪ್ ಸಿನಿಮಾಗೆ ರಿಷಬ್ ಶೆಟ್ಟಿ ಡೈರೆಕ್ಷನ್!

ಬುಧವಾರ, 13 ಸೆಪ್ಟಂಬರ್ 2023 (08:40 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜೊತೆಗೆ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ರಿಷಬ್ ಶೆಟ್ಟಿಗೆ ಕಿಚ್ಚ ಸುದೀಪ್ ಎಂದರೆ ಅಚ್ಚುಮೆಚ್ಚು. ಸದ್ಯಕ್ಕೆ ರಿಷಬ್ ಕಾಂತಾರ 2 ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅದಾದ ಬಳಿಕ ಬಾಲಿವುಡ್ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯಿದೆ.

ಇವೆರಡೂ ಸಿನಿಮಾಗಳು ಮುಗಿದ ಬಳಿಕ ರಿಷಬ್ ಕಿಚ್ಚ ಸುದೀಪ್ 50 ನೇ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿಯಿದೆ. ಈ ಸಿನಿಮಾವನ್ನು ಪ್ರಮುಖ ನಿರ್ಮಾಣ ಸಂಸ್ಥೆಯೊಂದು ಅದ್ಧೂರಿ ವೆಚ್ಚದಲ್ಲಿ ನಿರ್ಮಿಸಲಿದೆ ಎಂಬ ಸುದ್ದಿಯಿದೆ.

ಕಾಂತಾರ ಸಿನಿಮಾಗೆ ಮೊದಲು ರಿಷಬ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಒಂದು ಸಿನಿಮಾ ನಿರ್ದೇಶನ ಮಾಡಲು ತಯಾರಿ ನಡೆಸಿದ್ದರು. ಆದರೆ ಕಾಂತಾರ ಹಿಟ್ ಆದ ಮೇಲೆ ಆ ಸಿನಿಮಾ ತೆರೆ ಮರೆಗೆ ಸರಿಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ