ಗರ್ಭಿಣಿಯಾಗಿರುವ ರಾಮ್ ಚರಣ್ ಪತ್ನಿಗೆ ಜ್ಯೂ.ಎನ್ ಟಿಆರ್ ಗಿಫ್ಟ್

ಮಂಗಳವಾರ, 2 ಮೇ 2023 (14:46 IST)
Photo Courtesy: Twitter
ಹೈದರಾಬಾದ್: ಆರ್ ಆರ್ ಆರ್ ಸ್ಟಾರ್ ಗಳಾದ ರಾಮ್ ಚರಣ್ ತೇಜ ಮತ್ತು ಜ್ಯೂ.ಎನ್ ಟಿಆರ್ ಇತ್ತೀಚೆಗೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂಬಿತ್ಯಾದಿ ಸುದ್ದಿಗಳಿವೆ.

ಆದರೆ ಇಬ್ಬರೂ ಸ್ಟಾರ್ ಗಳ ಪತ್ನಿಯರು ಮಾತ್ರ ತಮ್ಮ ಸ್ನೇಹ ಸಂಬಂಧ ಮುಂದುವರಿಸಿದ್ದಾರೆ. ಇತ್ತೀಚೆಗೆ ರಾಮ್ ಚರಣ್ ಪತ್ನಿ ಉಪಾಸನಾ ಬೇಬಿ ಶೊವರ್ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ಆದರೆ ಜ್ಯೂ.ಎನ್ ಟಿಆರ್ ಕುಟುಂಬ ಗೈರಾಗಿದ್ದು ಎಲ್ಲರೂ ಹುಬ್ಬೇರುವಂತೆ ಮಾಡಿತ್ತು.

ಆದರೆ ಕಾರ್ಯಕ್ರಮಕ್ಕೆ ಗೈರಾಗಿದ್ದರೂ ಜ್ಯೂ.ಎನ್ ಟಿಆರ್ ಪತ್ನಿ ಪ್ರಣತಿ ತಮ್ಮ ಸ್ನೇಹಿತೆ ಉಪಾಸನಾಗೆ ಗಿಫ್ಟ್ ಕೊಡುವುದನ್ನು ಮರೆತಿಲ್ಲವಂತೆ. ಉಪಾಸನಾಗೆ ಇಷ್ಟವಾದ ಎರಡು ಸಿಹಿ ತಿಂಡಿಗಳ ಗಿಫ್ಟ್ ಬಾಕ್ಸ್ ನ್ನು ನೀಡಿದ್ದಾರೆ ಎಂಬ ಸುದ್ದಿಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ