ಡಿ ಬಾಸ್ ದರ್ಶನ್ ಅಭಿಮಾನಿಗಳಿಗೆ ಖುಷಿ: ಕಾಟೇರ ಬಿಗ್ ಅಪ್ ಡೇಟ್ ಇಂದು
ಡಿ ಬಾಸ್ ದರ್ಶನ್ ನಾಯಕರಾಗಿರುವ ಕಾಟೇರ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ದರ್ಶನ್ ಗೆ ನಾಯಕಿಯಾಗಿ ಮಾಲಾಶ್ರೀ ಪುತ್ರಿ ರಾಧನಾ ಅಭಿನಯಿಸುತ್ತಿದ್ದಾರೆ.
ಇಂದು ಸಂಜೆ 6.02 ಕ್ಕೆ ಕಾಟೇರ ಸಿನಿಮಾದ ಬಿಗ್ ಅಪ್ ಡೇಟ್ ಒಂದನ್ನು ನೀಡುವುದಾಗಿ ನಿರ್ದೇಶಕ ತರುಣ್ ಸುಧೀರ್ ಘೋಷಿಸಿದ್ದಾರೆ. ಅದು ಏನಿರಬಹುದು ಎಂಬ ಕುತೂಹಲ ಅಭಿಮಾನಿಗಳಿಗಿದೆ.
ಮೂಲಗಳ ಪ್ರಕಾರ ಕಾಟೇರ ಸಿನಿಮಾದ ಮೊದಲ ಹಾಡು ಬಿಡುಗಡೆ ಬಗ್ಗೆ ತರುಣ್ ಸುಧೀರ್ ಅಪ್ ಡೇಟ್ ಕೊಡಬಹುದು ಎನ್ನಲಾಗಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಮುಂದಿನ ವರ್ಷ ಚಿತ್ರ ತೆರೆ ಕಾಣುವ ಸಾಧ‍್ಯತೆಯಿದೆ.