ರಮೇಶ್ ಅರವಿಂದ್ `ಪ್ಯಾರಿಸ್ ಪ್ಯಾರಿಸ್’ಗೆ `ಕ್ವೀನ್’ ಕಾಜಲ್ ಅಗರ್ವಾಲ್

ಸೋಮವಾರ, 25 ಸೆಪ್ಟಂಬರ್ 2017 (22:02 IST)
ಬೆಂಗಳೂರು: ಬಾಲಿವುಡ್ `ಕ್ವೀನ್’ ಸಿನಿಮಾ ಕನ್ನಡ ಸೇರಿದಂತೆ ತಮಿಳು ಭಾಷೆಗಳಿಗೆ ರಿಮೇಕ್ ಆಗ್ತಿರೋದು ಗೊತ್ತೇ ಇದೆ. ಆದರೆ ಈ ಸಿನಿಮಾಗೆ ಹೊಸ ನಾಯಕಿ ಸಿಕ್ಕಿದ್ದಾರೆ.

ನಟ ರಮೇಶ್ ಅರವಿಂದ್ ನಿರ್ದೇಶಿಸುತ್ತಿರುವ ಈ ಸಿನಿಮಾದ ತಮಿಳು ಭಾಷೆಯಲ್ಲಿ ನಟಿ ಕಾಜಲ್ ಅಗರ್ವಾಲ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ `ಪ್ಯಾರಿಸ್ ಪ್ಯಾರಿಸ್’ ಎಂದು ಹೆಸರಿಡಲಾಗಿದೆ. ಬಿಟೌನ್ ನಲ್ಲಿ ಕಂಗನಾ ಮಾಡಿದ ಪಾತ್ರವನ್ನ ಇಲ್ಲಿ ಕಾಜಲ್ ಮಾಡಲಿದ್ದಾರೆ.

ಇನ್ನು ಕನ್ನಡದಲ್ಲಿ `ಬಟರ್ ಫ್ಲೈ’ ಎಂದು ಹೆಸರಿಡಲಾಗಿದ್ದು, ಚಿತ್ರೀಕರಣ ಕೂಡ ಭರ್ಜರಿಯಾಗಿ ನಡೆಯುತ್ತಿದೆ. `ಪ್ಯಾರಿಸ್ ಪ್ಯಾರಿಸ್’ ಚಿತ್ರದ ಫಸ್ಟ್ ಲುಕ್ ಕೂಡ ಔಟ್ ಆಗಿದ್ದು, ನಿನ್ನೆ(ಸೆ.24) ಚಿತ್ರದ ಮುಹೂರ್ತ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ