ಕಮಲ್ ಹಾಸನ್ 232ನೇ ಸಿನಿಮಾ ಅನೌನ್ಸ್

ಗುರುವಾರ, 17 ಸೆಪ್ಟಂಬರ್ 2020 (16:04 IST)
ಚೆನ್ನೈ : ಕಮಲ್ ಹಾಸನ್ ಅಭಿನಯದ ಹೊಸ ಸಿನಿಮಾ ಅನೌನ್ಸ್ ಆಗಿದ್ದು ಆ ಮೂಲಕ ಕಮಲ್ ಹಾಸನ್ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

ಕಮಲ್ ಹಾಸನ್ ಸದ್ಯ ಇಂಡಿಯನ್ 2 ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು. ಆದರೆ ಇದೀಗ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು  ಕಮಲ್ ಹಾಸನ್ 232ನೇ ಸಿನಿಮಾವಾಗಿದೆ.

ಚಿತ್ರದ ಫಸ್ಟ್ ಲುಕ್ ಈಗಾಗಲೇ ರಿಲೀಸ್ ಆಗಿದ್ದು, ಇದನ್ನು ಶೇರ್ ಮಾಡಿದ ಕಮಲ್ ಹಾಸನ್ ಹೊಸ ಜರ್ನಿ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ