ತಮಿಳಿನ ಹಿರಿಯ ನಟ ಪ್ಲೋರೆಂಟ್ ಸಿ ಪೆರಿರಾ ಕೊರೊನಾದಿಂದ ನಿಧನ

ಬುಧವಾರ, 16 ಸೆಪ್ಟಂಬರ್ 2020 (12:12 IST)
ಚೆನ್ನೈ : ತಮಿಳಿನ ಹಿರಿಯ ನಟ ಪ್ಲೋರೆಂಟ್ ಸಿ ಪೆರಿರಾ ಕೊರೊನಾದಿಂದ ಸೋಮವಾರದಂದು ರಾತ್ರಿ ಮೃತಪಟ್ಟಿದ್ದಾರೆ.

67 ವರ್ಷ ವಯಸ್ಸಿನ ನಟ ಕೊರೊನಾದಿಂದ ಬಳಲುತ್ತಿರುವ ಹಿನ್ನಲೆಯಲ್ಲಿ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ 10 ಗಂಟೆಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಪೊರುಳ್ ಯವಲ್ ಸಿನಿಮಾ ನಿರ್ದೇಶಕ ಸೀನು ರಾಮಸ್ವಾಮಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಇವರು  ಧರ್ಮದುರೈ, ವಿಐಪಿ 2, ರಾಜ ಮಂತ್ರಿ, ತೊಡರೈ ಮುಂತಾದ ಹಲವು ಸಿನಿಮಾದಲ್ಲಿ ನಟಿಸಿದ್ದರು. 2014ರಲ್ಲಿ ಬಿಡುಗಡೆಯಾದ ಪ್ರಭು ಸೋಲಮನ್  ನಿರ್ದೇಶನದ ಕಾಯಲ್ ಸಿನಿಮಾದಲ್ಲಿ ಇವರು ಖ್ಯಾತಿ ಪಡೆದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ