ನನ್ನ ಮಗಳನ್ನ ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದರು: ಕಮಲ್ ಹಾಸನ್
ಸೋಮವಾರ, 14 ಆಗಸ್ಟ್ 2017 (20:49 IST)
ತಮ್ಮ ಜೀವನದ ಟಾಪ್ 70 ನೆಚ್ಚಿನ ಚಿತ್ರಗಳನ್ನ ಪತ್ರಿಕೆಯಲ್ಲಿ ಪ್ರಕಟಿಸಿರುವ ಸೂಪರ್ ಸ್ಟಾರ್ ಕಮಲ್ ಹಾಸನ್, 1994ರ ಮಹಾನಂದಿ ಚಿತ್ರದ ಚಿತ್ರಕಥೆ ರಚನೆಗೆ ಸ್ಫೂರ್ತಿಯಾದ ಜೀವನದ ಭಯಾನಕ ಘಟನೆಯೊಂದನ್ನ ಬಿಚ್ಚಿಟ್ಟಿದ್ದಾರೆ.
ಹೌದು, ಅವರ ಮಗಳ ಅಪಹರಣ ಯತ್ನದ ಕಥೆ. ನನ್ನ ಮನೆಗೆಲಸದವಳ ನೆರವಿನಿಂದ ಹಣಕ್ಕಾಗಿ ನನ್ನ ಮಗಳನ್ನ ಕಿಡ್ನ್ಯಾಪ್ ಮಾಡುವ ಸಂಚು ರೂಪಿಸಲಾಗಿತ್ತು. ಈ ಬಗ್ಗೆ ಅವರು ಟ್ರಯಲ್ ಕೂಡ ಮಾಡಿದ್ದರು. ಆಕಸ್ಮಿಕವಾಗಿ ಅವರ ಸಂಚು ನನಗೆ ತಿಳಿದುಹೋಯ್ತು. ಇದರಿಂದ ನನ್ನ ಕೋಪ ನೆತ್ತಿಗೇರಿತ್ತು. ನನ್ನ ಮಗಳಿಗಾಗಿ ಅವರನ್ನ ಕೊಲ್ಲುವ ಹಂತಕ್ಕೆ ಹೋಗಿದ್ದೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.. ಆದರೆ, ಅಪಹರಣ ಯತ್ನ ನಡೆದಿದ್ದು, ಶೃತಿ ಹಾಸನ್ ಅಥವಾ ಅಕ್ಷರ ಹಾಸನ್ ಮೇಲೆಯೇ ಎಂಬ ಬಗ್ಗೆ ಕಮಲ್ ಹಾಸನ್ ತಿಳಿಸಿಲ್ಲ.
ಆ ಸಂದರ್ಭ ನಾನು ಒಂದು ಸಿನಿಮಾಗೆ ಬರೆಯ ಬೇಕಿದ್ದ ಚಿತ್ರಕಥೆ ಒಂದು ತಿಂಗಳ ಕಾಲ ವಿಳಂಬವಾಯ್ತು. ಬಳಿಕ ಕಥೆ ಬರೆಯುವುದಕ್ಕೆ ಕೂತಾಗ ತನ್ನಷ್ಟಕ್ಕೆ ತಾನೇ ಬರೆಸಿಕೊಂಡು ಹೋಯಿತು. ನನ್ನೊಳಗಿದ್ದ ಭಯ ಕಥೆಗೆ ಸ್ಫೂರ್ತಿ ನೀಡಿತು ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ