ಕಾರಣ ನೀಡದೇ ನಟಿಯನ್ನು ಕೈಬಿಟ್ಟ ‘ಕಮಲಿ’ ತಂಡ: ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ

ಬುಧವಾರ, 16 ಮಾರ್ಚ್ 2022 (09:00 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಮಲಿ ಧಾರವಾಹಿಯಲ್ಲಿ ತಾರಾ ಪಾತ್ರ ಮಾಡುತ್ತಿದ್ದ ನಟಿ ಸ್ವಪ್ನಾ ದೀಕ್ಷಿತ್ ರನ್ನು ಕೈ ಬಿಡಲಾಗಿದೆ. ಈ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಆರೋಪ ಮಾಡಿದ್ದಾರೆ.

ಕಮಲಿ ಧಾರವಾಹಿ 1000 ಕಂತು ಪೂರೈಸಿದೆ. ಇದುವರೆಗೂ ತಾರಾ ಪಾತ್ರವನ್ನು ಸ್ವಪ್ನಾ ನಿರ್ವಹಿಸುತ್ತಿದ್ದರು. ಆದರೆ ಇದೀಗ ತಮಗೂ ತಿಳಿಸದೇ ಪಾತ್ರ ಬದಲಾವಣೆ ಮಾಡಲಾಗಿದೆ ಎಂದಿದ್ದಾರೆ.

ತಾರಾ ಪಾತ್ರಕ್ಕೆ ಸ್ವಪ್ನಾ ಬದಲು ಬೇರೊಬ್ಬ ನಟಿ ಬಂದಿರುವ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ನೋಡಿ ವೀಕ್ಷಕರು ಅಚ್ಚರಿ ವ್ಯಕ್ತಪಡಿಸಿದ್ದರು. ಈ ಬಗ್ಗೆ ನಟಿ ಇನ್ ಸ್ಟಾಗ್ರಾಂ ಲೈವ್ ಬಂದು ಸ್ಪಷ್ಟನೆ ನೀಡಿದ್ದಾರೆ. ನನಗೂ ಮಾಹಿತಿ ನೀಡದೇ ಬದಲಾವಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ವಿವಾದಕ್ಕೀಡಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ