ಬಿಡುಗಡೆಗೆ ರೆಡಿಯಾಯ್ತು ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ: ಇಂದು ಟ್ರೈಲರ್
ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದ ಟ್ರೈಲರ್ ಇಂದು ಸಂಜೆ 4 ಗಂಟೆಗೆ ಲಾಂಚ್ ಆಗಲಿದೆ. ಈ ಸಿನಿಮಾದಲ್ಲಿ ದಿಗಂತ್, ಐಂದ್ರಿತಾ ಜೊತೆಗೆ ಕಿರುತೆರೆಯ ಖ್ಯಾತ ನಟಿ ರಂಜಿನಿ ರಾಘವನ್ ಕೂಡಾ ಅಭಿನಯಿಸಿದ್ದಾರೆ.
ಮಲೆನಾಡಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಸಿನಿಮಾ ಕತೆಯೂ ಮಲೆನಾಡಿನ ಮಧ್ಯಮ ವರ್ಗದ ಕುಟುಂಬದ ಹಿನ್ನಲೆ ಹೊಂದಿದೆ. ಹೀಗಾಗಿ ಪೋಸ್ಟರ್ ನಿಂದಲೇ ಚಿತ್ರ ಗಮನ ಸೆಳೆಯುತ್ತಿದೆ.