ಮಾಸ್ತಿಗುಡಿ ಚಿತ್ರೀಕರಣದ ಸಂದರ್ಭ ಇಬ್ಬರು ಸಹ ಕಲಾವಿದರ ಸಾವು ಮತ್ತು ಕೆಂಪೇಗೌಡ-2 ಚಿತ್ರದ ಶೂಟಿಂಗ್ ವೇಳೆ ನಟರಾದ ಕೋಮಲ್, ಯೋಗಿ ಗಾಯಗೊಂಡ ಪ್ರಕರಣ ಹಸಿರಾಗಿವಾಗಲೇ ಮತ್ತೊಂದು ದುರ್ಘಟನೆ ನಡೆದಿದೆ.
ಗೋದ್ರಾ ಚಿತ್ರದ ಶೂಟಿಂಗ್ ವೇಳೆ ಸ್ಫೋಟಕ ಸಿಡಿದು ನೀನಾಸಂ ಸತೀಶ್ ಹೊಟ್ಟೆಗೆ ಗಾಯವಾಗಿದೆ. ಹೊಟ್ಟೆ ಭಾಗದ ಮಾಂಸ ಕಿತ್ತು ಬಂದಿದೆ. ಗಾಯದಿಂದ ಸ್ವಲ್ಪ ಸಮಯ ಪ್ರಾಣಹೋದಂತೆ ಆಗುತ್ತಿತ್ತು ಎಂದು ಮಾಧ್ಯಮವೊಂದರ ಜೊತೆ ಮಾತನಾಡುತ್ತಾ ನೀನಾಸಂ ಸತೀಶ್ ಹೇಳಿದ್ದಾರೆ.
ಕುಕ್ಕೆ ಸುಬ್ರಹಣ್ಯದ ಬಳಿ ಅರಣ್ಯದಲ್ಲಿ ಶೂಟಿಂಗ್ ವೇಳೆ ಈ ಅವಘಡ ಸಂಭವಿಸಿದೆ. ರಿಯಾಲಿಟಿಗಾಗಿ ಸ್ವಲ್ಪ ರಿಸ್ಕ್ ತೆಗೆದುಕೊಂಡು ಸಾಹಸ ದೃಶ್ಯದ ಚಿತ್ರೀಕರಣಕ್ಕೆ ಮುಂದಾಗಿದ್ದೆವು. ಗಟ್ಟಿ ಗ್ಲಾಸ್`ಗೆ ಸ್ಫೋಟಕ ಸಿಡಿದಿದ್ದರಿಂದ ಗಾಯವಾಗಿದೆ. ಘಟನೆ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಮಾಮಸ ಕಿತ್ತುಬಂದಿದ್ದ ಹೊಟ್ಟೆಗಯ ಭಾಗಕ್ಕೆ ಹೊಲಿಕೆ ಹಾಕಿರುವ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ವಿಶ್ರಾಂತಿ ಪಡೆಯುತ್ತಿರುವುದಾಗಿ ನೀನಾಸಂ ಸತೀಶ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ