ಮತ್ತೆ ಮೋಡಿ ಮಾಡಿತು ಗಣಿ-ಭಟ್ಟರ ಜೋಡಿ!

ಸೋಮವಾರ, 4 ಸೆಪ್ಟಂಬರ್ 2017 (08:31 IST)
ಬೆಂಗಳೂರು: ಗಣೇಶ್-ಯೋಗರಾಜ್ ಭಟ್ ಜೋಡಿ ಮತ್ತೆ ಮುಂಗಾರು ಮಳೆ ಸುರಿಸಿದ್ದಾರೆ. ಇವರ ಕಾಂಬಿನೇಷನ್ ನಲ್ಲಿ ಬಂದ ಮುಗುಳು ನಗೆ ಪ್ರೇಕ್ಷಕರಿಗೆ ಭಾರೀ ಮೋಡಿ ಮಾಡಿದೆ.

 
ಕರ್ನಾಟಕದಾದ್ಯಂತ 250 ಥಿಯೇಟರ್ ಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಎಲ್ಲಾ ಥಿಯೇಟರ್ ಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಲ್ಲಿಗೆ ಭಟ್ಟರು ಗಣಿ ಸೇರಿ ಮತ್ತೊಂದು ಸೂಪರ್ ಹಿಟ್ ಚಿತ್ರ ಕೊಟ್ಟ ಹಾಗಾಯ್ತು.

ಇನ್ನು ಎರಡು ವಾರ ಕಳೆದರೆ ಚಿತ್ರ ಸೂಪರ್ ಹಿಟ್ ಎಂದು ಅನೌನ್ಸ್ ಮಾಡುವುದರಲ್ಲಿ ಸಂಶಯವೇ ಇಲ್ಲ. ಸಿನಿಮಾ ನೋಡಿದ ಪ್ರೇಕ್ಷಕನೂ ಫುಲ್ ಖುಷ್ ಆಗಿದ್ದಾನೆ. ಭಾರೀ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು ನೋಡಿದರೆ ಮತ್ತೆ ಮುಂಗಾರು ಮಳೆ ಮಾಡಿದ ಖುಷಿಯಲ್ಲಿ ಚಿತ್ರತಂಡವಿದೆ.

ಇದನ್ನೂ ಓದಿ.. ಅಕ್ಕಿ ತೊಳೆದ ನೀರು ಚೆಲ್ಲುವ ಮುನ್ನ ಇದನ್ನು ಓದಿ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ