ಸೂಪರ್ ಸ್ಟಾರ್ ಮೋಹನ್ ಲಾಲ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ ನಂದಕಿಶೋರ್

ಗುರುವಾರ, 1 ಸೆಪ್ಟಂಬರ್ 2022 (10:20 IST)
ಬೆಂಗಳೂರು: ಸ್ಯಾಂಡಲ್ ವುಡ್ ನಿರ್ದೇಶಕ ನಂದಕಿಶೋರ್ ಈಗ ಮಲಯಾಳಂ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ. ಸೂಪರ್ ಸ್ಟಾರ್ ನಟ ಮೋಹನ್ ಲಾಲ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ.

ಮೋಹನ್ ಲಾಲ್ ನಾಯಕರಾಗಿರುವ ವೃಷಭ ಸಿನಿಮಾಗೆ ನಂದಕಿಶೋರ್ ನಿರ್ದೇಶನ ಮಾಡಲಿದ್ದಾರೆ. ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾವಿಗಿದ್ದು, ‘ವೃಷಭ’ ಎನ್ನುವ ಟೈಟಲ್ ಫಿಕ್ಸ್ ಆಗಿದೆ. ಸ್ವತಃ ಮೋಹನ್ ಲಾಲ್ ನಂದಕಿಶೋರ್ ರನ್ನು ಮಲಯಾಳಂಗೆ ಸ್ವಾಗತಿಸಿದ್ದಾರೆ.

ಮುಂದಿನ ವರ್ಷ ಜುಲೈಗೆ ಚಿತ್ರ ಸೆಟ್ಟೇರಲಿದೆ. ಈ ಸಿನಿಮಾದಲ್ಲಿ ಮೋಹನಲ್ ಲಾಲ್ ಅಲ್ಲದೆ, ತೆಲುಗಿನ ಸ್ಟಾರ್ ನಟರೊಬ್ಬರೂ ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ